ಅರ್ಜೆಂಟಾಗಿ ಸೆಕ್ಸ್ ಗೆ ಹೋಗ್ಬೇಕು- ಇ ಪಾಸ್ ಕೊಡಿ; ಅರ್ಜಿ ನೀಡಿದ ವ್ಯಕ್ತಿ ಪೊಲೀಸ್ ಠಾಣೆಗೆ ಕರೆಸಿದಾಗ ಆದದ್ದು ಹೀಗೆ...
Friday, May 14, 2021
ಕಣ್ಣೂರು; ಕೇರಳದಲ್ಲಿ ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇದೆ. ಈ ಸಂದರ್ಭದಲ್ಲಿ ತುರ್ತಾಗಿ ಹೊರಗಡೆ ಹೋಗಬೇಕಾದವರಿಗೆ ಇ ಪಾಸ್ ನ್ನು ಪೊಲೀಸ್ ಇಲಾಖೆ ನೀಡುತ್ತದೆ.
ಇ ಪಾಸ್ ಗೆಂದು ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೇರಳದ ಕಣ್ಣೂರಿನ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಕಣ್ಣೂರು ಜಿಲ್ಲೆಯ ಕಣ್ಣಪುರಂನ ವ್ಯಕ್ತಿಯೊಬ್ಬ ಇ ಪಾಸ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಅರ್ಜೆಂಟಾಗಿ ಸೆಕ್ಸ್ ಗೆ ಹೋಗಬೇಕು. ಇ ಪಾಸ್ ಕೊಡಿ ಎಂಬ ಬೇಡಿಕೆಯನ್ನಿಟ್ಟಿದ್ದಾನೆ.
ಇಂತಹ ವಿಚಿತ್ರ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸಿದ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದಾರೆ. ಆತನಲ್ಲಿ ಇಂತಹ ಬೇಡಿಕೆ ಯಾಕೆ ಇಟ್ಟೆ ಎಂದು ಪ್ರಶ್ನಿಸಿದಾಗ ನಾನು ಆ ರೀತಿ ಹೇಳಿಯೆ ಇಲ್ಲ ಎಂದು ಹೇಳಿದ್ದಾನೆ. ಆತನ ಇಮೇಲ್ ತೋರಿಸಿದಾಗ ಅದರಲ್ಲಿ ಎಡವಟ್ಟು ಆಗಿದೆ ಎಂದು ಆತನಿಗೆ ಗೊತ್ತಾಗಿದೆ. ಆತನಿಗೆ 6 ಗಂಟೆಗೆ ಅರ್ಜೆಂಟಾಗಿ ಹೊರಗೆ ಹೋಗಬೇಕು ಎಂದು ಬರೆಯಬೇಕಿತ್ತು. (Six) ಸಿಕ್ಸ್ ಎಂದು ಬರೆಯುವ ಬದಲು (sex)ಸೆಕ್ಸ್ ಎಂದು ಬರೆದಿದ್ದ. ಸಣ್ಣ ಸ್ಪೆಲ್ಲಿಂಗ್ ಮಿಸ್ಟೇಕ್ ನ್ನು ಗಮನಿಸದೆ ಇಮೇಲ್ ಮಾಡಿದ್ದ. ಪೊಲೀಸರ ವಿಚಾರಣೆ ವೇಳೆ ಆತ ನೀಡಿದ ಸಮಜಾಯಿಷಿ ನಿಜ ಹೇಳುತ್ತಿದ್ದಾನೆ ಎಂದು ಅರಿತುಕೊಂಡು ಪೊಲೀಸರು ಆತನಿಗೆ ಇಪಾಸ್ ವ್ಯವಸ್ಥೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ.