
ಕೋವಿಡ್‌ನಿಂದ ತಾಯಿಯನ್ನು ಕಳೆದುಕೊಂಡೆ, ಆಕೆಯ ಮೊಬೈಲ್ ಆದರೂ ಹುಡುಕಿಕೊಡಿ. ಯಾಕೆಂದರೆ ಅದರಲ್ಲಿ..... ಪುಟ್ಟ ಬಾಲಕಿಯ ಅಳಲು ಕಲ್ಲು ಹೃದಯನ್ನೂ ಕರಗಿಸುತ್ತೆ
ಕೊಡಗು: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯ ಮೊಬೈಲ್ ಕಳವಾದ ಘಟನೆ ನಡೆದಿದೆ. ಇದೀಗ ಆ ಮಹಿಳೆಯ ಪುಟ್ಟ ಮಗಳು ಆ ಮೊಬೈಲ್ ಫೋನ್ ಅನ್ನು ಹುಡುಕಿಕೊಡುವಂತೆ, ಪೊಲೀಸರು, ಜಿಲ್ಲಾಧಿಕಾರಿ ಮತ್ತು ಜನ ಪ್ರತಿನಿಧಿಗಳನ್ನು ವಿನಂತಿಸಿದ್ದಾಳೆ.
ಕೊರೋನಾ ದಿಂದ ತಾಯಿಯನ್ನು ಕಳೆದುಕೊಂಡಿದ್ದೇನೆ. ಆಕೆ ಮೃತದೇಹ ಹಸ್ತಾಂತರಿಸುವಾಗ ಆಕೆಯ ಜೊತೆ ಇದ್ದ ಮೊಬೈಲ್ ಇರಲಿಲ್ಲ. ದಯವಿಟ್ಟು ಮೊಬೈಲ್ ಹುಡುಕಿ ಕೊಡಿ. ಯಾಕೆಂದರೆ ಅದರಲ್ಲಿ ನನ್ನ ಮತ್ತು ಅಮ್ಮನ ನೆನಪುಗಳಿವೆ ಎಂದು ಬಾಲಕಿ ಗದ್ಗದಿತವಾಗಿ ವಿನಂತಿಸಿದ್ದಾಳೆ.