ಉಳ್ಳಾಲ: ಮೀನುಗಾರಿಕೆ ತೆರಳಿದ್ದ ಬೋಟ್ ಅಪಘಾತ ( Video)
Sunday, May 23, 2021
ಉಳ್ಳಾಲ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ಬೋಟ್ ಅಪಘಾತಕ್ಕೀಡಾಗಿ ದಡಕ್ಕೆ ಅಪ್ಪಳಿಸಿದ ಘಟನೆ ಇಂದು ಬೆಳಗ್ಗಿನ ಜಾವ ಕೋಡಿ ಬಳಿ ನಡೆದಿದೆ. ಬೋಟ್‌ನಲ್ಲಿದ್ದ ಎಲ್ಲಾ 10 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕಡಲಿನಲ್ಲಿ ನಡೆದ ಅವೈಜ್ಞಾನಿಕ ಬ್ರೇಕ್‌ವಾಟರ್ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಮೀನುಗಾರರು ಆರೋಪಿಸಿದ್ದಾರೆ. ಕೃತವಾಗಿ ಅಳವಡಿಸಲಾಗಿದ್ದ ಎರಡು ಬಂಡೆಗಳ ಸಾಲಿನ ನಡುವಿನ ಅಂತರದಿಂದಾಗಿ ಬೋಟ್ ಅಪಘಾತಕ್ಕೆ ಈಡಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.