-->

MRPL ನೇಮಕಾತಿ ಗೆ ತಡೆ ಎಂಬದು ನಾಟಕ, ಸ್ಥಳೀಯರಿಗೆ ಮೀಸಲಾತಿ ಕಾಯ್ದೆ ರೂಪಿಸುವುದಷ್ಟೆ ಪರಿಹಾರ: ಮುನೀರ್ ಕಾಟಿಪಳ್ಳ

MRPL ನೇಮಕಾತಿ ಗೆ ತಡೆ ಎಂಬದು ನಾಟಕ, ಸ್ಥಳೀಯರಿಗೆ ಮೀಸಲಾತಿ ಕಾಯ್ದೆ ರೂಪಿಸುವುದಷ್ಟೆ ಪರಿಹಾರ: ಮುನೀರ್ ಕಾಟಿಪಳ್ಳ

 MRPL ಅಧಿಕಾರಿಗಳ ಜೊತೆಗೆ ಚರ್ಚೆ, ನೇಮಕಾತಿಗೆ ತಡೆ, ಮುಂದಿನ ಆಯ್ಕೆ ಪ್ರಕ್ರಿಯೆ ಸ್ಥಳೀಯ ಸಂಸದರು, ಶಾಸಕರ ಜೊತೆಗೆ ಚರ್ಚಿಸಿ..." ಎಂಬ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಎದ್ದು ಬಂದಿರುವ ಆಕ್ರೋಶದಿಂದ ಪಾರಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿಯ ಶಾಸಕರುಗಳು ಆಡಿರುವ ಹೊಸ ನಾಟಕ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. 



ಸಂಸದರು, ಶಾಸಕರುಗಳಿಗೆ ನಿಜಕ್ಕೂ ಕಾಳಜಿ ಇದ್ದರೆ ರಾಜ್ಯ ಬಿಜೆಪಿ ಸರಕಾರ ನೇಮಕಾತಿಗಳಲ್ಲಿ ಸ್ಥಳೀಯರಿಗೆ 80 ಶೇಕಡಾ ಮೀಸಲಾತಿ ಕಡ್ಡಾಯಗೊಳಿಸಿ ಹೊಸ ಕಾಯ್ದೆ ತರುವಂತೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

MRPL ಸಹಿತ ಕರಾವಳಿ ಜಿಲ್ಲೆಗಳ ವಿವಿಧ ಸಾರ್ವಜನಿಕ, ಖಾಸಗಿ ರಂಗದ ಉದ್ಯಮಗಳಲ್ಲಿ ಸ್ಥಳೀಯರಿಗೆ  ಆದ್ಯತೆಯಲ್ಲಿ ಉದ್ಯೋಗ ದೊರಕಿಸಿಕೊಡುವಂತೆ, ಅದಕ್ಕಾಗಿ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಒಳಗೊಂಡ ಕಾಯ್ಧೆಯನ್ನು ರೂಪಿಸುವಂತೆ ಡಿವೈಎಫ್ಐ ಒತ್ತಾಯಿಸುತ್ತಲೇ ಬಂದಿದೆ. 2019 ರಲ್ಲಿ ಎಮ್ ಆರ್ ಪಿ ಎಲ್ 224 ಹುದ್ದೆಗಳ ನೇಮಕಾತಿಗೆ ಸ್ಥಳೀಯರಿಗೆ ಯಾವ ಆದ್ಯತೆಯನ್ನೂ ಒದಗಿಸದೆ ರಾಷ್ಟ ಮಟ್ಟದಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಿತ್ತು. ಆಗಲೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸ್ಥಳೀಯರಿಗೆ ಆದ್ಯತೆ ಒದಗಿಸದ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಯುವಂತೆ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಒಳಗೊಂಡು ಹೊಸತಾಗಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿತ್ತು. ಈ ಕುರಿತು ಕಾಯ್ದೆ ರೂಪಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿತ್ತು. ಕಾರ್ಮಿಕ ಸಂಘಟನೆಗಳು ಸ್ಥಳೀಯ ಸಂಸದರು, ಶಾಸಕರು, ಉಸ್ತುವಾರಿ ಸಚಿವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಆಗ ಪ್ರತಿಕ್ರಿಯಿಸದೆ ಮೌನವಾಗಿದ್ದ ಜನಪ್ರತಿನಿಧಿಗಳೇ ಇಂದಿನ ಈ ಘೋರ ಅನ್ಯಾಯಕ್ಕೆ ಕಾರಣ‌. ಈಗ ಜನಾಕ್ರೋಶ ಭುಗಿಲೆದ್ದಿರುವಾಗ ಕಂಪೆನಿಯ ಎಮ್ ಡಿ ಯ ಭೇಟಿ, ಮಾತುಕತೆ, ನೇಮಕಾತಿಗೆ ತಡೆ ಎಂಬ ಮಾತುಗಳಿಂದ ಯಾವ ಪ್ರಯೋಜನವೂ ಇಲ್ಲ. ಈಗಾಗಲೆ ಆಯ್ಜೆಗೊಂಡಿರುವ 184 ಜನ ಹೊರ ರಾಜ್ಯದವರಿಗೆ ನೇಮಕಾತಿ ಪತ್ರವೂ ಕೈ ಸೇರಿದೆ. ಕಂಪೆನಿಯ ಒಳಗಡೆಯೂ ಸೇರಿಕೊಂಡಿದ್ದಾರೆ. ಹಾಗಿರುತ್ತಾ ಇಂತಹ ನಾಟಕಗಳು ಆಕ್ರೋಶಿತ ಜನರಿಗೆ ಮಾಡುವ ಅನ್ಯಾಯ ಮಾತ್ರ ಎಂದಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಬಿಜೆಪಿ ಶಾಸಕರುಗಳಿಗೆ ನಿಜಕ್ಕೂ ಕಾಳಜಿ, ಪ್ರಾಮಾಣಿಕತೆ ಇದ್ದರೆ, ಮಹಿಷಿ ವರದಿಯ ಶಿಫಾರಸ್ಸುಗಳ ಆಧಾರದಲ್ಲಿ ಖಾಸಗಿ, ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ಸ್ಥಳೀಯರಿಗೆ ನೇಮಕಾತಿಯಲ್ಲಿ ಮೀಸಲಾತಿ ಒದಗಿಸಿ ತಮ್ಮದೇ ಕರ್ನಾಟಕ ರಾಜ್ಯ ಸರಕಾರ ಹೊಸ ಕಾಯ್ದೆ ರಚಿಸುವಂತೆ ಮಾಡಲಿ, ತಕ್ಷಣಕ್ಕೆ ಸುಗ್ರೀವಾಜ್ಞೆ ಹೊರಡಿಸಲಿ. ಅದು ಮಾತ್ರ ಎಮ್ಆರ್ ಪಿಎಲ್ ನ 224 ಉದ್ಯೋಗಗಳ‌‌ನ್ನು ಸ್ಥಳೀಯರಿಗೆ ಒದಗಿಸಿಕೊಡಲಿದೆ, ಭವಿಷ್ಯದಲ್ಲಿಯು ಕರ್ನಾಟಕದ ಯುವಜನತೆಗೆ ನಾಡಿನಲ್ಲಿ ಸೃಷ್ಟಿಯಾಗುವ ಉದ್ಯೋಗದದಲ್ಲಿ ಹಕ್ಕು ಒದಗಿಸಲಿದೆ, ಡಿವೈಎಫ್ಐ ಈ ಕುರಿತು ಸತತವಾಗಿ ಧ್ವನಿ ಎತ್ತುತ್ತಲೇ ಬಂದಿದೆ. ಅದರ ಹೊರತಾದ ಈ ರೀತಿಯ ಕ್ರಮಗಳು ಕೇವಲ ಕಣ್ಣೊರೆಸುವ ನಕಲಿ ನಾಟಕಗಳು ಮಾತ್ರ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99