ಮಂಗಳೂರು , ಉಡುಪಿಯಲ್ಲಿ ಗುರುವಾರ ಈದುಲ್ ಫಿತ್ರ್
Tuesday, May 11, 2021
ಮಂಗಳೂರು; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗುರುವಾರ ಈದುಲ್ ಫಿತ್ರ್ ನಡೆಯಲಿದೆ.
ಕರಾವಳಿ ಜಿಲ್ಲೆಯಲ್ಲಿ ಮುಸ್ಲಿಮರು ಪವಿತ್ರ ರಂಜಾನ್ ಉಪವಾಸ ಆರಂಭಿಸಿ ಇಂದಿಗೆ 29 ದಿನಗಳಾಗಿದೆ. 29 ನೇ ದಿನದಂದು ಚಂದ್ರದರ್ಶನವಾದರೆ ಮರುದಿನ ಈದುಲ್ ಫಿತ್ರ್ ಆಚರಣೆ ನಡೆಯುತ್ತದೆ.
ಆದರೆ 29 ದಿನದಂದು ಚಂದ್ರದರ್ಶನವಾಗದೆ ಇದ್ದರೆ 30 ನೇ ದಿನದ ಉಪವಾಸದ ಮರುದಿನ ಈದುಲ್ ಫಿತ್ರ್ ಆಚರಿಸಲಾಗುತ್ತದೆ. ಆದರೆ 29 ನೇ ದಿನವಾದ ಇಂದು ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗುರುವಾರ ಈದುಲ್ ಫಿತ್ರ್ ನಡೆಯಲಿದೆ.
ಆದರೆ ರಾಜ್ಯದ ಇತರೆಡೆ ಮುಸ್ಲಿಮರು ಇಂದಿಗೆ 28 ದಿನದ ಉಪವಾಸ ಮುಗಿಸಿದ್ದು ನಾಳೆ ( ಬುಧವಾರ) ಚಂದ್ರದರ್ಶನವಾದರೆ ಗುರುವಾರವೆ ಈದುಲ್ ಫಿತ್ರ್ ಆಚರಿಸಲಿದ್ದಾರೆ. ಆದರೆ ಒಂದು ವೇಳೆ ಅವರಿಗೆ ನಾಳೆ ಚಂದ್ರದರ್ಶನವಾಗದೆ ಇದ್ದರೆ ರಾಜ್ಯದ ಇತರೆಡೆ ಶುಕ್ರವಾರ ಈದುಲ್ ಫಿತ್ರ್ ನಡೆಯಲಿದೆ