
ಮದುವೆ ದಿನದ ರಾತ್ರಿಯೇ ವರನ ವಿರುದ್ಧ ಪ್ರಕರಣ ದಾಖಲು- ಅಷ್ಟಕ್ಕೂ ವರ ಮಾಡಿದ್ದೇನು ಗೊತ್ತಾ
ಮಂಗಳೂರು: ಕರ್ನಾಟಕದ ನೂತನ ಕೊರೋನಾ ಸೂಚನೆಗಳನ್ನು ಉಲ್ಲಂಘನೆ ಮಾಡಿ ಮದುವೆ ರಿಸೆಪ್ಷನ್ ಮಾಡಿದ ಯುವಕ ವಿರುದ್ಧ ಇದೀಗ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡೆ ಮನೆ ನಿವಾಸಿ ರಂಜಿತ್ ಎಂಬಾತನ ಮದುವೆ ಮೇ 9ರಂದು ನಡೆದಿತ್ತು. ಇದಕ್ಕೆ ಸ್ಥಳೀಯ ಆಡಳಿತದಿಂದ ಮುಂಗಡ ಅನುಮತಿಯನ್ನೂ ಪಡೆಯಲಾಗಿತ್ತು. ಸ್ಥಳೀಯಾಡಳಿತ 25 ಜನರಗೆ ಸೇರುವಂತೆ ಅವಕಾಶ ಕಲ್ಪಿಸಿ ಅನುಮತಿಯನ್ನು ನೀಡಿತ್ತು.
ಸಿದ್ದಕಟ್ಟೆಯಲ್ಲಿ ಮದುವೆ ಶಾಸ್ತ್ರ ಮುಗಿಸಿ ವರ ತನ್ನ ಅಡ್ಯಾರ್‌ನಲ್ಲಿನ ಮನೆಗೆ ಆಗಮಿಸಿದ್ದು, ಬಳಿಕ ಅಲ್ಲಿ ರಾತ್ರಿ ವೇಳೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಪಾರ್ಟಿ ನಡೆಸಿದ್ದಲ್ಲದೇ, ಇಲ್ಲಿ ಅಕ್ರಮವಾಗಿ ಲೌಡ್ ಸ್ಪೀಕರ್ ಹಾಕಿ ಡ್ಯಾನ್ಸ್ ಕೂಡಾ ಮಾಡಿದ್ದರು. ಈ ನಿಟ್ಟಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ವರನ ವಿರುದ್ಧ ಪ್ರಕರಣ ದಾಖಲಾಗಿದೆ