ತೌಕ್ತೆ ಚಂಡಮಾರುತ ಎಫೆಕ್ಟ್; ಮಂಗಳೂರಿನಲ್ಲಿ ರಾತ್ರಿಯಿಂದ ನಿರಂತರ ಮಳೆ
Saturday, May 15, 2021
ಮಂಗಳೂರು; ತೌಕ್ತೆ ಚಂಡಮಾರುತ ಎಫೆಕ್ಟ್ ಗೆ ಮಂಗಳೂರಿನಲ್ಲಿ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಸಂಜೆ ದಟ್ಟ ಮೋಡ ಸೃಷ್ಟಿಯಾಗಿದ್ದು ಭಾರಿ ಮಳೆಯಾಗುವ ಆತಂಕ ಎದುರಾಗಿತ್ತು. ಹವಾಮಾನ ಇಲಾಖೆ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿತ್ತು. ಆದರೆ ರಾತ್ರಿ 12 ಗಂಟೆಗೆ ಸಾಧಾರಣ ಮಳೆ ಆರಂಭವಾಗಿ ನಿರಂತರವಾಗಿ ಸುರಿಯುತ್ತಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.
ಇನ್ನೂ ಚಂಡಮಾರುತ ಎಫೆಕ್ಟ್ ಗೆ ನಿನ್ನೆಯಿಂದಲೇ ಸಮುದ್ರ ಪ್ರಕ್ಷುಬ್ಧ ಗೊಂಡಿದ್ದು ಭಾರಿ ಗಾತ್ರದ ಅಲೆಗಳು ಆತಂಕ ಸೃಷ್ಟಿಸಿದ್ದವು. ಇನ್ನೂ ಮೂರು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ