ಕೋವಿಡ್ ನೆಗೆಟಿವ್ ರಿಪೋರ್ಟ್ ನ ಕಾಟವೆ ಬೇಡವೆಂದು ಈ ಸೇತುವೆ ಮೇಲೆ ನಡೆಯಿತು ವಿವಾಹ
Friday, May 28, 2021
ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ಸರಕಾರಗಳು ಮದುವೆಗೆ ಕಟ್ಟುನಿಟ್ಟಿನ ನಿಯಮಾವಳಿ ಗಳನ್ನು ಮಾಡಿದೆ. ರಾಜ್ಯ ರಾಜ್ಯಕ್ಕೆ ಬೇರೆಯದೆ ಆದ ನಿಯಾಮವಳಿ ಇರುತ್ತದೆ.
ಕೇರಳ ಮತ್ತು ತಮಿಳುನಾಡಿನ ಇಂತದೆ ಕಠಿಣ ನಿಯಾಮವಳಿಗಳಿಂದ ಪಾರಾಗಲು ಈ ಜೋಡಿಯೊಂದು ಸೇತುವೆ ಮೇಲೆ ಮದುವೆಯಾಗಿದೆ. ಈ ಸೇತುವೆ ಹೆಸರು ಚಿನಾರ್. ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿ ಈ ಸೇತುವೆ ಇದೆ.
ಕೇರಳ ರಾಜ್ಯದ ಇಡುಕ್ಕಿಯ ಮರಯೂರಿನ ಉನ್ನಿಕೃಷ್ಣ ಮತ್ತು ತಮಿಳುನಾಡಿನ ದಿಂಡಿಗುಲ್ ಬತ್ಲಗುಂಡು ಮೂಲದ ವಧು ತಂಗಮಾಯಿಲ್ ಅವರ ಮದುವೆ ಇದೆ ಸೇತುವೆ ಮೇಲೆ ನಡೆದಿದೆ. ಮದುವೆ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಕೊರೊನಾ ನೆಗೆಟಿವ್ ಟೆಸ್ಟ್ ಮಾಡಿಸಬೇಕಿತ್ತು. ಪ್ರತಿಯೊಬ್ಬರಿಗೆ 2,600 ರೂಪಾಯಿ ಆಗಲಿದ್ದು 10 ಮಂದಿ ಮದುವೆಗೆ ಹೋಗಬೇಕಿದ್ದರೆ 26 ಸಾವಿರ ರೂಪಾಯಿ ಕೊಡಬೇಕಿತ್ತು. ಈ ತೊಂದರೆ ಬೇಡವೆಂದು ಸೇತುವೆ ಮೇಲೆ ಈ ಜೋಡಿ ಮದುವೆಯಾಗಿದೆ.
ಮದುವೆಯಲ್ಲಿ ವಧು ಮತ್ತು ವರ ಇಬ್ಬರು ಮಾತ್ರ ನೆಗೆಟಿವ್ ವರದಿ ತಂದು ಸೇತುವೆ ಮೇಲೆ ಹಾರ ಬದಲಾಯಿಸಿಕೊಂಡಿದ್ದಾರೆ. ತಾಳಿ ಕಟ್ಟುವಾಗ ಎರಡೂ ಕುಟುಂಬಗಳು ಸೇತುವೆಯ ಎರಡೂ ಬದಿಯಲ್ಲಿ ನಿಂತು ಶುಭ ಕೋರಿದ್ದಾರೆ. ಇತ್ತೀಚೆಗೆ ಇದೇ ಸೇತುವೆಯಲ್ಲಿ 11 ಮದುವೆಗಳು ನಡೆದಿದ್ದವಂತೆ