ಮಂಗಳೂರಿನಲ್ಲಿ ಹಸಿ ಕಸ , ಒಣ ಕಸ ಬೇರ್ಪಡಿಸಿ ನೀಡದಿದ್ದರೆ ದಂಡ- ಎಚ್ಚರಿಕೆ
Tuesday, May 18, 2021
ಮಂಗಳೂರು,: ರಾಜ್ಯ ಪೌರ ಘನ ತ್ಯಾಜ್ಯ ನಿಯಮ, ಮಂಗಳೂರು ಮಹಾನಗರಪಾಲಿಕೆ ತ್ಯಾಜ್ಯ ನಿರ್ವಹಣೆ ಉಪವಿಧಿಯಂತೆ ಹಾಗೂ ರಾಜ್ಯ ಉಚ್ಛ ನಾಯ್ಯಾಲಯದ ನಿರ್ದೇಶನದಂತೆ ಮನಪಾ ವ್ಯಾಪ್ತಿಯ ಮನೆಗಳು ಹಾಗೂ ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಮೂಲದಲ್ಲಿಯೇ ಹಸಿ ಕಸ, ಒಣ ಕಸವನ್ನಾಗಿಸಿ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವುದು ಕಡ್ಡಾಯವಾಗಿರುತ್ತದೆ.
ಪ್ರಸುತ್ತ ಪಾಲಿಕೆ ವ್ಯಾಪ್ತಿ ಒಳಗೆ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಏರಿಕೆಯಾಗುವುತ್ತಿರುವುದರಂದ ಮೂಲದಲ್ಲಿಯೇ ಕಸ ವಿಗಂಡಿಸದೆ ನೀಡಿದ್ದಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಸ ವಿಗಂಡಿಸುವ ಕರ್ತವ್ಯ ನಿರ್ವಹಿಸುತ್ತಿರುವ ನೈರ್ಮಲ್ಯ ಕಾರ್ಮಿಕರು ಅಪಾಯಕ್ಕೆ ಒಳಗಾಗುವ ಸಾಧ್ಯಕ್ಕೆ ಹೆಚ್ಚಾಗಿರುತ್ತದೆ. ಈ ಹಿನ್ನಲೆ ಯಲ್ಲಿ ಈಗಾಗಲೇ ಕಸವನ್ನು ಬೇರ್ಪಡಿಸಿ ನೀಡುವಂತೆ ಪಾಲಿಕೆ ವತಿಯಿಂದ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿರುತ್ತದೆ.
ಮಂಗಳೂರು ಮಹಾನಗರ ಪಾಲಿಕೆಯು ಇನ್ನೂ ಮುಂದೆ ಬೇರ್ಪಡಿಸದಿರುವ ಮಿಶ್ರಿತ ಕಸವನ್ನು ಸಂಗ್ರಹಿಸದೆ ತಿರಸ್ಕರಿಸಲು ತಿರ್ಮಾನಿಸಿದ್ದು, ಈ ಹಿನ್ನಲೆಯಲ್ಲಿ ಪ್ರತಿ ಶುಕ್ರವಾರ ಒಣ ಕಸವನ್ನು ಹಾಗೂ ಶುಕ್ರವಾರ ಹೊರತು ಪಡಿಸಿ ವಾರದ ಎಲ್ಲ ದಿನಗಳಲ್ಲಿ ಹಸಿ ಕಸವನ್ನು ಪಾಲಿಕೆಯ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ನೀಡಿ ಸ್ವಚ್ಛ ಮಂಗಳೂರು ನಿರ್ಮಾಣಕ್ಕೆ ಸಾರ್ವಜನಿಕರು ಸಹಕಾರಿಸಬೇಕು.
ಈ ಸೂಚನೆಯನ್ನು ಉಲ್ಲಂಘಿಸುವುವವರ ವಿರುದ್ಧ ಕೆ.ಎಮ್.ಸಿ ನಿಯಮ 1976 ಹಾಗೂ ಮಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಉಪವಿಧಿಯಂತೆ ಭಾರಿ ದಂಡವನ್ನು ವಿಧಿಸಲಾಗುತ್ತದೆ. ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಎಸೆಯುವುದು ಅಥವಾ ಹಾಕುವುದು ಕಂಡುಬಂದಲ್ಲಿ 10,000 ರೂ. ಭಾರಿ ದಂಡವನ್ನು ವಿಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಿಸಲು ಕಾಂಪೋಸ್ಟಿಂಗ್ ಘಟಕವನ್ನು ಅಳವಡಿಸಿಕೊಂಡಲ್ಲಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯ ಘನ ತ್ಯಾಜ್ಯ ಕರದಲ್ಲಿ ಶೇ.50ರಷ್ಟು ವಿನಾಯಿತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ