ಈತ ಹೆಂಡತಿ ಗೆ ಕೊಟ್ಟದ್ದು 1 ಕೆ ಜಿ ಮೊಣಕಾಲುದ್ದದ ಚಿನ್ನದ ತಾಳಿ- ವೈರಲ್ ವಿಡಿಯೋ ಬೆನ್ನತ್ತಿ ಹೋದ ಪೊಲೀಸರಿಗೆ.... ( video)
Tuesday, May 25, 2021
ಮುಂಬಯಿ; ಮಹಾರಾಷ್ಟ್ರ ರಾಜ್ಯದ ಭಿವಾಂಡಿಯ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ 1 ಕೆ.ಜಿ ತೂಕದ ಮಂಗಳಸೂತ್ರವನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾನೆ. ಮುಂಬೈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಬೆಸ್ತು ಬಿದ್ದಿದ್ದಾರೆ.
ಬಾಲಾ ಎಂಬ ಭಿವಾಂಡಿಯ ವ್ಯಕ್ತಿ ಹೆಂಡತಿಗೆ 1 ಕೆ ಜಿ ಚಿನ್ನ ಉಡುಗೊರೆ ನೀಡಿದಾತ. ಈತ ಪತ್ನಿಗೆ ಒಂದು ಕೆಜಿ ಚಿನ್ನ ಉಡುಗೊರೆ ನೀಡಿದ್ದಾನೆ ಎಂಬ ವೈರಲ್ ವಿಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆತನ ಮನೆಗೆ ಭೇಟಿ ನೀಡಿದ್ದಾರೆ. ಆತನನ್ನು ವಿಚಾರಿಸಿದಾಗ ಅಸಲಿ ವಿಚಾರ ಬಯಲಾಗಿದೆ.
ಪೊಲೀಸರ ವಿಚಾರಣೆಯ ವೇಳೆ ಆಭರಣ ಸಂಪೂರ್ಣ ಚಿನ್ನವಲ್ಲ. ಅದು ಚಿನ್ನದ ಕೋಟ್ ಉಳ್ಳ ಮಂಗಳಸೂತ್ರ ಎಂದು ತಿಳಿದುಬಂದಿದೆ. ಈತ ಜ್ಯುವೆಲ್ಲರಿ ಶಾಪ್ನಿಂದ 38,000 ರೂಪಾಯಿಗೆ ಇದನ್ನು ಕೊಂಡು ತಂದನಂತೆ. ಇದಕ್ಕೆ ಸಂಬಂಧಿಸಿದ ಆಧಾರಗಳನ್ನು ತೋರಿಸಿದ ಬಳಿಕ ಆತನನ್ನು ಠಾಣೆಯಿಂದ ಬಿಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ "ವಿಡಿಯೋ ವೈರಲ್ ಆದ ಬಳಿಕ ಈ ವಿಚಾರ ನಮ್ಮ ಗಮನಕ್ಕೆ ಬಂದಿತು. ಹೆಚ್ಚು ಚಿನ್ನಾಭರಣವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸರಿಯಲ್ಲ, ಈ ಬಗ್ಗೆ ಬಾಲಾರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಇದು ನಕಲಿ ಚಿನ್ನದ ಮಂಗಳಸೂತ್ರ ಎಂದು ಗೊತ್ತಾಗಿದೆ. ಜ್ಯುವೆಲ್ಲರಿ ಶಾಪ್ನಲ್ಲಿ 38 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ ಅವರು ಹೇಳಿದ್ದು ಬಳಿಕ ಅವರನ್ನು ಶಾಪ್ಗೆ ಕರೆದೊಯ್ದು ಪರಿಶೀಲಿಸಲಾಯಿತು. ಅದು ನಕಲಿ ಎಂಬುದು ದೃಢಪಟ್ಟಿದೆ ಎಂದಿದ್ದಾರೆ.