
ಮಂಗಳೂರಿನಲ್ಲಿ ಆತಂಕ ಸೃಷ್ಟಿಸಿದ ದರೋಡೆಕಾರರ ಬಂಧನಕ್ಕೆ ಮುಂದುವರಿದ ಬೇಟೆ- ಮತ್ತೆ ಆರು ಮಂದಿ ಬಂಧನ
Thursday, April 15, 2021
ಮಂಗಳೂರು: ಮಂಗಳೂರಿನಲ್ಲಿ ಹೆದ್ದಾರಿ ದರೋಡೆ, ಸುಲಿಗೆ ಮೊದಲಾದ ಕೃತ್ಯದ ಆತಂಕ ಮೂಡಿಸಿದ ದರೋಡೆಕೋರ ರ ಬೆನ್ನತ್ತಿದ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.
ಮೂಡಬಿದ್ರೆ, ಮೂಲ್ಕಿ ಮತ್ತು ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ 9 ಮಂದಿಯನ್ನು ಮೂಡಬಿದ್ರೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇವರ ಬಾಯಿ ಬಿಡಿಸಿದಾಗ ಮತ್ತೆ ಆರು ಮಂದಿಯ ಸುಳಿವು ಸಿಕ್ಕಿದ್ದು ಅವರನ್ನು ಇಂದು ಬಂಧಿಸಲಾಯಿತು. ಮೊಹಮ್ಮದ್ ಝುಬೈರ್, ಇಬ್ರಾಹಿಂ ಲತೀಫ್, ರಾಕೇಶ್, ಅರ್ಜುನ್, ಮೋಹನ್, ಮನ್ಸೂರ್ ಬಂಧಿತರು. ಇವರ ವಿರುದ್ದ ಈಗಾಗಲೇ 28 ಪ್ರಕರಣಗಳು ದಾಖಲಾಗಿತ್ತು. ಬಂಧಿತರಿಂದ ಮೂರು ಕಾರು, 8 ಮೊಬೈಲ್ ಪೋನ್, 54 ಗ್ರಾಂ ಚಿನ್ನ,3.5 ಕೆಜಿ ಬೆಳ್ಳಿಯ ವಸ್ತು, 2 ತಲವಾರು ವಶಪಡಿಸಿಕೊಳ್ಳಲಾಗಿದೆ.