
ಅದಾನಿ ಸಂಸ್ಥೆಯವರು ಏರ್ ಪೋರ್ಟ್ ನಲ್ಲಿ ಹೀಗೆ ಮಾಡದಿದ್ರೆ ಮಸಿ ಬಳಿತಾರಂತೆ ಕಾಂಗ್ರೆಸಿಗರು: ಐವನ್ ಕೊಟ್ರು ಎಚ್ಚರಿಕೆ (video)
Wednesday, April 14, 2021
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆ ಪಡೆದುಕೊಂಡ ಅದಾನಿ ಸಂಸ್ಥೆಯವರು ವಿಮಾನ ನಿಲ್ದಾಣದ ನಾಮಫಲಕದಲ್ಲಿ ಅದಾನಿ ಸಂಸ್ಥೆಯ ಹೆಸರನ್ನು ಸೇರಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ಇಂದು ಮಂಗಳೂರಿನಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರು ಅದಾನಿ ಹೆಸರಿಗೆ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಏರ್ ಪೋರ್ಟ್ ಗೆ ಅದಾನಿ ಸಂಸ್ಥೆಯ ಹೆಸರಿಟ್ಟಿರುವುದು ಕಾನೂನುಬಾಹಿರ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೂಡ ಏರ್ ಪೋರ್ಟ್ ಅಥಾರಿಟಿ ಹೇಳಿದೆ. ಇನ್ನೊಂದು ವಾರದಲ್ಲಿ ಮಂಗಳೂರು ಏರ್ ಪೋರ್ಟ್ ನಲ್ಲಿರುವ ಅದಾನಿ ಹೆಸರನ್ನು ತೆಗೆಯದಿದ್ದರೆ ಅದಕ್ಕೆ ಮಸಿ ಬಳಿಯುವುದಾಗಿ ಎಚ್ಚರಿಸಿದ್ದಾರೆ.