ಮಂಗಳೂರು;ಈತನ ವಿಶೇಷ ಡಿಸೈನ್ ಒಳ ಚಡ್ಡಿಯಲ್ಲಿ ಬಚ್ಚಿಟ್ಟದ್ದು 33 ಲಕ್ಷ ರೂ ಮೌಲ್ಯದ ಚಿನ್ನ
Saturday, March 13, 2021
ಮಂಗಳೂರು;ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಡಿಸೈನ್ ನ ಚಡ್ಡಿಯಲ್ಲಿ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಾತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಇಂದು ದುಬೈನಿಂದ ಏರ್ ಇಂಡಿಯಾ ಪ್ಲೈಟ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದಾಗ ಗೋಲ್ಡ್ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ. ಕೊಪ್ಪದ ಮೊಹಮ್ಮದ್ ಖಾಲಿದ್ ಎಂಬ 45 ವರ್ಷದ ವ್ಯಕ್ತಿ ಯನ್ನು ತಪಾಸಣೆ ನಡೆಸಿದಾಗ ಈತನ ಒಳಚಡ್ಡಿಯಲ್ಲಿ 737 ಗ್ರಾಂ ಚಿನ್ನ ಪತ್ತೆಯಾಗಿದೆ. ಈತ ಚಿನ್ನ ಸ್ಮಗ್ಲಿಂಗ್ ಮಾಡಲೆಂದೆ ಚಡ್ಡಿಯನ್ನು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಿಸಿದ್ದ. ಈತನಿಂದ ವಶಪಡಿಸಿಕೊಂಡ ಚಿನ್ನದ ಬೆಲೆ ರೂ 3375470 ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ