-->
ಮಂಗಳೂರು; ಈ ಯುವತಿಯ ಒಳಚಡ್ಡಿ, ಸ್ಯಾನಿಟರಿ ಪ್ಯಾಡ್ ನಲ್ಲಿತ್ತು ಒಂದು ಕೋಟಿ ಬಂಗಾರ!

ಮಂಗಳೂರು; ಈ ಯುವತಿಯ ಒಳಚಡ್ಡಿ, ಸ್ಯಾನಿಟರಿ ಪ್ಯಾಡ್ ನಲ್ಲಿತ್ತು ಒಂದು ಕೋಟಿ ಬಂಗಾರ!

ಮಂಗಳೂರು; ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಯುವತಿಯೊಬ್ಬಳನ್ನು ಅನುಮಾನದ ಮೇಲೆ ತಪಾಸಣೆ ನಡೆಸಿದಾಗ ಆಕೆಯ ಒಳಚಡ್ಡಿ ಮತ್ತು ಸ್ಯಾನಿಟರಿ ಪ್ಯಾಡ್ ನಲ್ಲಿ ಒಂದು ಕೋಟಿ ಗೂ ಅಧಿಕ ಮೌಲ್ಯದ ಚಿನ್ನ  ಪತ್ತೆಯಾಗಿದೆ.

ಕಾಸರಗೋಡಿನ ಸಮೀರ ಎಂಬ ಯುವತಿ ದುಬೈ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಳು. ಈಕೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅನುಮಾನದ ಮೇಲೆ ತಪಾಸಣೆ ನಡೆಸಿದ್ದಾರೆ. ಆಗ ಯುವತಿಯ ಒಳಚಡ್ಡಿ, ಸ್ಯಾನಿಟರಿ ಪ್ಯಾಡ್ ಮತ್ತು ಸಾಕ್ಸ್ ನಲ್ಲಿ ಬಂಗಾರ ಸಿಕ್ಕಿದೆ.  ಈಕೆಯ ಬಳಿ 2.41 ಕೆ ಜಿ ಚಿನ್ನ ಸಿಕ್ಕಿದ್ದು ಅದರ ಮೌಲ್ಯ 1.10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಆಕೆಯ ಬಳಿಯಲ್ಲಿ ವಿದೇಶಿ ಸಿಗರೇಟುಗಳು ಪತ್ತೆಯಾಗಿದ್ದು ಆಕೆಯನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ

Ads on article

Advertise in articles 1

advertising articles 2

Advertise under the article