ದೀಪಾವಳಿ ಉಡುಗೊರೆ ಕೊಡಲಿಲ್ಲ ಅಂತ ಮಹಿಳಾ ಐಪಿಎಸ್ ಅಧಿಕಾರಿಗೆ ಡೈವೋರ್ಸ್ ಬೆದರಿಕೆ ಹಾಕಿದ ಪತಿ; ಹಲವು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪತಿಯ ವಿರುದ್ದ ಪ್ರಕರಣ ದಾಖಲಿಸಿದ ಅಧಿಕಾರಿ
Saturday, February 6, 2021
ಬೆಂಗಳೂರು: ದೀಪಾವಳಿ ಉಡುಗೊರೆ ನೀಡಿಲ್ಲವೆಂದು ವಿಚ್ಚೇದನ ಬೆದರಿಕೆ ಸೇರಿದಂತೆ, ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬೆಂಗಳೂರಿನ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಪತಿಯ ವಿರುದ್ಧವೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು
ಪತಿ ನಿತೀನ್ ಸುಬಾಶ್ ಸೇರಿದಂತೆ ಒಟ್ಟು 7 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವರ್ತಿಕಾ ಅವರು2009ರ ಬ್ಯಾಚ್ನ ಅಧಿಕಾರಿ ಅಗಿದ್ದು 2011 ರಲ್ಲಿ ವಿವಾಹವಾಗಿದ್ದರು. ಐಎಫ್ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಯಾಗಿರುವ ನಿತೀನ್, ಕೆಲ ರಾಯಬಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿಗೆ ಕುಡಿಯುವ ಮತ್ತು ಧೂಮಪಾನ ಮಾಡುವ ಅತಿಯಾದ ಚಟವಿದ್ದು ಇದನ್ನು ಬಿಡುವಂತೆ ಹಲವು ಬಾರಿ ಹೇಳಿದಾಗಲು ಜಗಳ ಮಾಡಿ ಹಲ್ಲೆ ಮಾಡುತ್ತಾರೆ. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಕೂಡ ಮುರಿದು ಹೋಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದು ಮಾತ್ರವಲ್ಲದೆ ಹಣಕ್ಕಾಗಿ ಪದೇ ಪದೇ ಪಿಡಿಸುತ್ತಿದ್ದಾರೆ. ನನ್ನ ಅಜ್ಜಿಯ ಬಳಿ ಐದು ಲಕ್ಷದ ಚೆಕ್ ಪಡೆದು ಮನೆ ಮಾಡುವಾಗ 35 ಲಕ್ಷ ಹಣ ಪಡೆದಿದ್ದರು. ಇದೀಗ ಮತ್ತಷ್ಟು ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಇದೀಗ ವರ್ತಿಕಾ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.