ಬಿಜೆಪಿ ಸರಕಾರ ವಿರುದ್ಧ ವಿಶ್ವ ಹಿಂದೂ ಪರಿಷತ್ ಕಿಡಿ; ಕಾರಣ ಏನು ಗೊತ್ತಾ? (Video)
Thursday, February 4, 2021
ಮಂಗಳೂರು; ರಾಜ್ಯ ಬಿಜೆಪಿ ಸರಕಾರದ ವಿರುದ್ದ ಸಂಘ ಪರಿವಾರದ ಪ್ರಮುಖ ಸಂಘಟನೆ ಕಿಡಿಕಾರಿದೆ. ರಾಜ್ಯ ಬಿಜೆಪಿ ಸರಕಾರವು ಖಾಸಗಿ ದೇವಸ್ಥಾನಗಳು ನೊಂದಾಣಿ ಮಾಡುವಂತೆ ನೀಡಿದ ಆದೇಶವೆ ಸರಕಾರದ ವಿರುದ್ದ ವಿಶ್ವ ಹಿಂದೂ ಪರಿಷತ್ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಮುಖಂಡರಾದ ಶರಣ್ ಪಂಪ್ ವೆಲ್ ಮತ್ತು ಎಂ ಬಿ ಪುರಾಣಿಕ್ ಅವರು ಸರಕಾರದ ವಿರುದ್ದ ಹರಿಹಾಯ್ದರು. ಕಾಂಗ್ರೆಸ್ ಸರಕಾರದ ನೀತಿಗಳನ್ನು ಬಿಜೆಪಿ ಸರಕಾರ ಮುಂದುವರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶರಣ್ ಪಂಪ್ ವೆಲ್ ಆದೇಶ ವಾಪಾಸು ಪಡೆಯದಿದ್ದರೆ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. (ವಿಡಿಯೋ ನೋಡಿ)