ಮಂಗಳೂರಿನ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ: ನಾಲ್ವರು ಯುವತಿಯರ ರಕ್ಷಣೆ
ಮಂಗಳೂರು: ಮಂಗಳೂರು ನಗರ ಪೊಲೀಸರು ಮಂಗಳೂರು ನಗರದ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ದಾಳಿ ನಡೆಸಿದ್ದಾರೆ.
ಮಂಗಳೂರಿನ ಕೆ ಎಸ್ ರಾವ್ ರಸ್ತೆಯಲ್ಲಿರುವ ಹಿಂದೂಸ್ತಾಬ್ ಲಾಡ್ಜ್ ನಲ್ಲಿ ಈ ವೇಶ್ಯಾವಾಟಿಕೆ ನಡೆಯುತ್ತಿತ್ತು. ಈ ವೇಶ್ಯಾವಾಟಿಕೆ ಕೇಂದ್ರದಲ್ಲಿದ್ದ ನಾಲ್ವರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಈ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಗೆ ದಾಳಿ ಮಾಡಿದ ಪೊಲೀಸರು ಲಾಡ್ಜ್ ಮಾಲಕ ಮೋಹನ್, ಮ್ಯಾನೇಜರ್ ಅಬ್ದುಲ್ ಬಶೀರ್, ರೂಂ ಬಾಯ್ ಉದಯ್ ಶೆಟ್ಟಿ, ಗಿರಾಕಿಗಳಾದ ಭರತ್ ಮತ್ತು ಬಾಲಕೃಷ್ಣ ಎಂಬವರನ್ನು ಬಂಧಿಸಿದ್ದಾರೆ.
ಯುವತಿಯರನ್ನು ವೇಶ್ಯಾವಾಟಿಕೆ ಕೇಂದ್ರಕ್ಕೆ ಕರೆ ತಂದಿದ್ದ ಸುನಿಲ್ ಎಂಬಾತನು ಪರಾರಿಯಾಗಿದ್ದಾನೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ , ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ,ಸೆಂಟ್ರಲ್ ಉಪವಿಭಾಗದ ಎಸಿಪಿ ಜಗದೀಶ್ ಅವರ ಮಾರ್ಗರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಗೋವಿಂದರಾಜು ಬಿ ಮತ್ತು ರೇವತಿ , ಪಿಎಸ್ ಐ ನಾಗರಾಜ್, ಜಗದೀಶ್ ಮತ್ತು ಸಿಬ್ಬಂದಿಗಳಾದ ಮಹೇಶ್, ಸುಜನ್ ಶೆಟ್ಟಿ, ತಿಪ್ಪೆರೆಡ್ಡಪ್ಪ, ಮಾದೇವ್, ಅರುಣಾ, ಪುಷ್ಪಾರಾಣಿ, ಸಾಗರ್ ರತ್ನಾಕರ್ , ಗುರುನಾಥ್ ಇವ ರುಗಳು ದಾಳಿಯಲ್ಲಿ ಭಾಗವಹಿಸಿದ್ದರು