ಫೈನಲ್ ಆಯಿತಾ ಸಚಿವರ ಪಟ್ಟಿ- ಕೋಟ OUT ಅಂಗಾರ IN?
ಮಂಗಳೂರು: ಯಡಿಯೂರಪ್ಪ ಸರಕಾರದಲ್ಲಿ ನೂತನ ಸಚಿವರು ಯಾರಾಗುತ್ತಾರೆ ಎಂಬ ಕುತೂಹಲ ರಾಜ್ಯಾದ್ಯಂತ ಇದೆ. ಒಂದು ಹಂತದಲ್ಲಿ ಹೊಸದಾಗಿ ಸಚಿವರ ಏಳು ಮಂದಿಯ ಹೆಸರು ಫೈನಲ್ ಆಗಿದೆ. ಏಳು ಮಂದಿಯ ಹೆಸರು ಫೈನಲ್ ಆಗಿದ್ದರೂ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಈ ಕಾರಣದಿಂದ ಊಹಪೋಹವೆ ಎಲ್ಲೆಡೆ ಹಬ್ಬಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟದ ಕುತೂಹಲ ಗರಿಗೆದರಿದೆ. ಸುಳ್ಯ ಶಾಸಕ ಅಂಗಾರ ಅವರು ಮಂತ್ರಿಯಾಗುತ್ತಾರೆಯೆ ಎಂಬುದು ಎಲ್ಲರ ಕುತೂಹಲವಾಗಿದ್ದು ಇದಕ್ಕೆ ಹೌದು ಎನ್ನುವ ಉತ್ತರವು ಸಿಕ್ಕಿದೆ. ಈ ಬಾರಿ ಅಂಗಾರ ಅವರಿಗೆ ಸಚಿವ ಸ್ಥಾನ ಒಲಿಯುವುದು ಪಕ್ಕಾ ಆಗಿದೆ. ಮುಖ್ಯಮಂತ್ರಿಗಳು ಖುದ್ದಾಗಿ ಶಾಸಕ ಅಂಗಾರರಿಗೆ ಪೋನ್ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದು ಅದರಂತೆ ಅಂಗಾರ ಅವರು ಬೆಂಗಳೂರಿಗೆ ತೆರಳಿದ್ದಾರೆ.
ಇನ್ನು ಅಂಗಾರರಿಗೆ ಸಚಿವ ಸ್ಥಾನ ಸಿಕ್ಕರೆ , ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವುದು ಪಕ್ಕಾ ಆಗಿದೆ. ನಾಳೆಯ ಸಚಿವ ಸಂಪುಟ ವಿಸ್ತರಣೆ ವೇಳೆ ಅವರನ್ನು ಕೈಬಿಡುವುದು ಪಕ್ಕಾ ಎಂಬ ಸುದ್ದಿಗಳು ಹರಿದಾಡುತ್ತಿದೆ