
ಒಳಚಡ್ಡಿಯಲ್ಲಿತು ಒಂದು ಕೋಟಿ ಬಂಗಾರ; ಮಂಗಳೂರಿನಲ್ಲಿ ಸಿಕ್ಕಿದ್ದು ಹೀಗೆ
ಮಂಗಳೂರು ; ಒಳಚಡ್ಡಿಯಲ್ಲಿ ಒಂದು ಕೋಟಿ ರೂ ಮೌಲ್ಯದ ಬಂಗಾರವನ್ನು ಸಾಗಿಸುತ್ತಿದ್ದ ಇಬ್ಬರು ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಫೈಜಲ್ ತೊಟ್ಟಿ ಮೆಲ್ಪಾರಂಬಾ (37) ಮತ್ತುಮೊಹಮ್ಮದ್ ಶುಹೈಬ್ ಮುಗು (31) ಬಂಧಿತರು. ಇವರಿಬ್ಬರೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯವರು.
ಇವರು ಜನವರಿ 14 ರಂದು ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 1384 ಮೂಲಕ ಶಾರ್ಜಾದಿಂದ ಮಂಗಳೂರಿಗೆ ಆಗಮಿಸಿದ್ದರು. ಇವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವೈಯಕ್ತಿಕವಾಗಿ ತಪಾಸಣೆ ನಡೆಸಿದಾಗ ಒಳಚಡ್ಡಿಯಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟದ್ದು ಕಂಡುಬಂದಿದೆ. ಇವರು 1.09 ಕೋಟಿ ಮೌಲ್ಯದ 2.154 ಕೆಜಿ 24 ಪರಿಶುದ್ಧತೆಯ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು. ಆರೋಪಿಗಳಿಂದ
2.154 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ