-->

ಈ ಹೈಸ್ಕೂಲ್ ಹುಡುಗಿಯ ಮೇಲೆ ನಡೆಯಿತು ಎರಡು ದಿನದಲ್ಲಿ 13 ಬಾರಿ ರೇಪ್: ಗೆಳೆಯ ಸೇರಿದಂತೆ 9  ಕಾಮುಕರ ದುಷ್ಕೃತ್ಯ-ಕಣ್ಣೀರು ತರಿಸುತ್ತದೆ ಈ ಬಾಲಕಿಯ ಕಹಾನಿ

ಈ ಹೈಸ್ಕೂಲ್ ಹುಡುಗಿಯ ಮೇಲೆ ನಡೆಯಿತು ಎರಡು ದಿನದಲ್ಲಿ 13 ಬಾರಿ ರೇಪ್: ಗೆಳೆಯ ಸೇರಿದಂತೆ 9 ಕಾಮುಕರ ದುಷ್ಕೃತ್ಯ-ಕಣ್ಣೀರು ತರಿಸುತ್ತದೆ ಈ ಬಾಲಕಿಯ ಕಹಾನಿ




ಉಮರಿಯಾ:  ಹೈಸ್ಕೂಲಿನಲ್ಲಿ ಕಲಿಯುತ್ತಿರುವ 13 ವರ್ಷದ ಬಾಲಕಿ  ಮೇಲೆ 48 ಗಂಟೆಗಳಲ್ಲಿ 9 ಕಾಮುಕರು 13 ಬಾರಿ ರೇಪ್  ನಡೆಸಿರುವ ಘಟನೆ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ನಡೆದಿದೆ.

 9ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯನ್ನು ಆಕೆಯ ಗೆಳೆಯ  ತನ್ನ ಸ್ನೇಹಿತನೊಂದಿಗೆ ಸೇರಿ, ಅಪಹರಿಸಿ ಈ ಕುಕೃತ್ಯ ಎಸಗಿದ್ದಾನೆ.

ಈತ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್​ರೇಪ್​ ಮಾಡಿದ್ದು ಬಳಿಕ ಡಾಭಾದಲ್ಲಿ 5 ಮಂದಿ ಅತ್ಯಾಚಾರವೆಸಗಿದ್ದಾರೆ. ಇದರ ಬಳಿಕ  ಟ್ರಕ್​ ಚಾಲಕರು ಬಾಲಕಿಯನ್ನು ರೇಪ್​ ಮಾಡಿದ್ದಾರೆ. ಇಷ್ಟೆಲ್ಲ ಕುಕೃತ್ಯಗಳು 48 ಗಂಟೆಯಲ್ಲಿ ನಡೆದಿದ್ದು ಬಾಲಕಿ ಅಸ್ವಸ್ಥಳಾಗಿದ್ದಾಳೆ.

 ಉಮಾರಿಯಾ ಮೂಲದ 13 ವರ್ಷದ ಬಾಲಕಿ  ಜಬಲ್ಪುರದಲ್ಲಿ ನೆಲೆಸಿದ್ದು 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಈಕೆ  ಜ.11ರಂದು   ಮಾರುಕಟ್ಟೆಗೆ ತರಕಾರಿ ತರಲು  ಹೋದಾಗ ರಾಹುಲ್​ ಕುಸ್ವಾಹ ಮತ್ತು ಆಕಾಶ್​ ಸಿಂಗ್ ಎಂಬುವರು ಆಕೆಗೆ  ಸಿಕ್ಕಿದ್ದು  ಬಳಿಕ ಬೈಕ್​ನಲ್ಲಿ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾರೆ. ​

ಆದರೆ ಅವರಿಬ್ಬರು  ಆಕೆಯನ್ನು ಭರೌಲಾ ಮತ್ತು ಛತನ್ ಪಕ್ಕದ​ ಕಾಡಿಗೆ ಕರೆದೊಯ್ದು  ಅತ್ಯಾಚಾರ ಎಸಗಿದ್ದಾರೆ. ಅದರ ನಂತರ Ns43ನಲ್ಲಿರುವ ಡಾಬಾಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಈ ವೇಳೆ ರಾಹುಲ್​ ಮತ್ತು ಆಕಾಶ್​ ಜೊತೆಗೆ ಡಾಬಾ ಆಪರೇಟರ್​ ಪರಾಸ್​ ಸೋನಿ ಮತ್ತು ಸಹೋದ್ಯೋಗಿಗಳಾದ ಮನು ಕಿವಾತ್​, ಒಂಕಾರ್​ ರೈ, ಈತೇಂದ್ರ ಸಿಂಗ್​ ಮತ್ತು ರಾಜನೀಶ್ ಛೌದರಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ​


ಮರುದಿನ ಆಕಾಶ್​ ಮತ್ತು ರಾಹುಲ್​ ವಿದ್ಯಾರ್ಥಿನಿಯನ್ನು ಕರೆದೊಯ್ದು ವಾಪಸ್ಸು ಕಾಡಿನ ಪ್ರದೇಶದ ಬಳಿ ಬಿಟ್ಟು ಹೋಗಿದ್ದಾರೆ. ಆಗ ಬಾಲಕಿ ಅಲ್ಲಿ ಹೋಗುತ್ತಿದ್ದ ಟ್ರಕ್​ ಚಾಲಕ ನಲ್ಲಿ ಡ್ರಾಪ್​ ಕೇಳಿದ್ದಾಳೆ. ಆಕೆಯನ್ನು ಹತ್ತಿಸಿಕೊಂಡ ಸ್ವಲ್ಪ ದೂರ ಹೋದ  ಬಳಿಕ ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ವಿಲಯತ್​ ಕಲಾ ಬರವಾರ  ಟೋಲ್​ ಬಳಿ ಬಾಲಕಿಯನ್ನು ಬಿಟ್ಟು ಹೋಗಿದ್ದಾನೆ.  ಬಾಲಕಿ ಮತ್ತೆ ಮತ್ತೊಂದು ಟ್ರಕ್​ ಬಳಿ ಡ್ರಾಪ್​ ಕೇಳಿದ್ದಾಳೆ. ಅಷ್ಟರಲ್ಲಾಗಲೇ ಬಾಲಕಿ ನಿರಂತರ ಅತ್ಯಾಚಾರದಿಂದ ಬಹಳ ಸುಸ್ತಾಗಿದ್ದನ್ನು ಕಂಡು ಆ ಚಾಲಕ ಕೂಡ ಬಾಲಕಿಯನ್ನು  ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.

ಕೊನೆಗೂ ಮನೆಗೆ ಮುಟ್ಟಿದ ಬಾಲಕಿ ನಡೆದ ಘಟನೆಯನ್ನು ತಾಯಿ ಮುಂದೆ ವಿವರಿಸಿದ್ದು ಬಳಿಕ ತಾಯಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಪೊಲೀಸರು ಒಂಬತ್ತು ಅತ್ಯಾಚಾರಿಗಳ ವಿರುದ್ಧ ಕೋಟ್ವಾಲಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 376 ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿಗಳಾದ  ಆಕಾಶ್​ ಸಿಂಗ್​, ರಾಹುಲ್​ ಕುಸ್ವಾಹ, ಮನು ಕಿವಾತ್​, ಓಂಕಾರ್​ ರೈ, ರಜನೀಶ್​ ಚೌಧರಿ, ಪರಾಸ್​ ಸೋನಿ ಮತ್ತು ಟ್ರಕ್​ ಡ್ರೈವರ್​, ರೋಹಿತ್​ ಯಾದವ್​ರನ್ನು ಬಂಧಿಸಿರುವ ಪೊಲೀಸರು ಇತೇಂದ್ರ ಮತ್ತು ಇತರೆ ಟ್ರಕ್​ ಡ್ರೈವರ್​ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99