-->

ಬಿ ಸಿ ರೋಡ್ ನಲ್ಲಿ ವೇಶ್ಯಾವಾಟಿಕೆ; ಐವರು ಯುವತಿಯರ ರಕ್ಷಣೆ! ಬಂಧನಕ್ಕೊಳಗಾದರು ಈ ಮೂವರು!

ಬಿ ಸಿ ರೋಡ್ ನಲ್ಲಿ ವೇಶ್ಯಾವಾಟಿಕೆ; ಐವರು ಯುವತಿಯರ ರಕ್ಷಣೆ! ಬಂಧನಕ್ಕೊಳಗಾದರು ಈ ಮೂವರು!

ಮಂಗಳೂರು; ಬಿಸಿರೋಡ್ ನಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ಬಂಟ್ವಾಳ  ನಗರ ಪೊಲೀಸರು ದಾಳಿ ನಡೆಸಿ ಐವರು ಯುವತಿಯರನ್ನು ರಕ್ಷಿಸಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಅವಿನಾಶ್ ರವರು ಸಿಬ್ಬಂದಿಗಳೊಂದಿಗೆ‌ ಬಿ ಸಿ ರೋಡ್ ನ ಭಾರತ್ ಕಾಂಪ್ಲೆಕ್ಸ್ ನ ತಳಭಾಗದಲ್ಲಿರುವ ಕೊಠಡಿಗೆ ದಾಳಿ ನಡೆಸಿದಾಗ ವೇಶ್ಯಾವಾಟಿಕೆ ನಡೆಯುತ್ತಿರುವುದು ಖಚಿತವಾಗಿದೆ.

  ಕೊಠಡಿಯಲ್ಲಿ ಇದ್ದ 5 ಜನ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಪುತ್ತೂರು ನೆಕ್ಕಿಲಾಡಿ ನಿವಾಸಿ ಶರಣ್‌ (28 )ವರ್ಷ, ಬಂಟ್ವಾಳ ಕರಿಯಂಗಳ ನಿವಾಸಿ ಭರತ್(28), ಪುತ್ತೂರು ಚಿಕ್ಕಮೂಡ್ನೂರು ಗ್ರಾಮ ನಿವಾಸಿ ಕಿರಣ್ ಕೆ (25)ಎಂಬವರುಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಒಟ್ಟು ರೂ. 4,400/ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99