ಮಂಗಳೂರಿನ ಈ ಇಬ್ಬರು ಸುಂದರಿಯರಿಂದ ಯುವಕರ ಹನಿಟ್ರ್ಯಾಪ್: ಬಲೆಗೆ ಬಿದ್ದಾಗ ಬಯಲಿಗೆ ಬಂತು...
Monday, January 18, 2021
ಮಂಗಳೂರು; ಮಂಗಳೂರಿನ ಸುರತ್ಕಲ್ ನ ಇಬ್ಬರು ಸುಂದರಿಯರು ತಮ್ಮ ಸೌಂದರ್ಯವನ್ನು ಬಂಡವಾಳ ವಾಗಿಸಿಕೊಂಡು ಯುವಕರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ದರೋಡೆ ಮಾಡುತ್ತಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇಧಿಸಿ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರು ಬಂಧಿತರ ಮಾಹಿತಿ ನೀಡಿದರು.
ಸುರತ್ಕಲ್ ನ ಶ್ರೀಮತಿ ಜೀನತ್ ಯಾನೆ ಜೀನತ್ ಮುಬೀನ್, ಶ್ರೀಮತಿ ರೇಶ್ಮಾ ಯಾನೆ ನೀಮಾ, ಜೀನತ್ ಗಂಡ ಇಕ್ಬಾಲ್ ಮುಹಮ್ಮದ್ ಯಾನೆ ಇಕ್ಬಾಲ್, ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಜೀಫ್ ಬಂಧಿತರು.
ಕೇರಳದ ಕುಂಬಳೆಯ ಯುವಕನೊಬ್ಬನನ್ನು ರೇಶ್ಮಾ ಮತ್ತು ಜೀನತ್ ಫೇಸ್‌ಬುಕ್ ನಲ್ಲಿ ಪರಿಚಯ ಮಾಡಿಕೊಂಡು ಮಂಗಳೂರಿಗೆ ಕರೆಸಿಕೊಂಡಿದ್ದಾರೆ. ಮಂಗಳೂರಿಗೆ ಬಂದ ಯುವಕನನ್ನು ಮನೆಗೆ ಕರೆದುಕೊಂಡು ಹೋಗಿ ಆತನಿಗೆ ಹಲ್ಲೆನಡೆಸಿದ್ದಾರೆ. ಬಳಿಕ ಆತನನ್ನು ವಿವಸ್ತ್ರ ಮಾಡಿ ವಿಡಿಯೋ ಮಾಡಿದ್ದಾರೆ. ಆತನಿಗೆ 5 ಲಕ್ಷ ಹಣದ ಬೇಡಿಕೆಯಿಟ್ಟು ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ತಿಳಿಸಿದ್ದಾರೆ. ಸಂತ್ರಸ್ತ ಯುವಕ ಭಯಗೊಂಡು 30 ಸಾವಿರ ನೀಡಿದ್ದು ಹಂತಹಂತವಾಗಿ ಹಣ ನೀಡುವುದಾಗಿ ತಿಳಿಸಿದ್ದಾನೆ.
ಬಳಿಕ ಈತ ಸುರತ್ಕಲ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಇನ್ನು ಆರು ಮಂದಿ ಯುವಕನನ್ನು ಬಲೆಗೆ ಬೀಳಿಸಿದ ಯುವತಿಯರು!
Honeytrap ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಯುವತಿಯರು ಇನ್ನು 6 ಯುವಕರನ್ನು ಬಲೆಗೆ ಬೀಳಿಸಿರುವುದು ತನಿಖೆ ವೇಳೆ ತಿಳಿದುಬಂದಿದೆ. ಇವರು ಕೇರಳ ಮೂಲದ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.