ಮಂಗಳೂರು ಬೀಚಿನಲ್ಲಿ ಸೂರ್ಯಾಸ್ತದ ನಂತರವೂ ಮದ್ಯದ ಬಾಟಲಿ ಜೊತೆ ಉಳಿದುಕೊಂಡರು: ಮುಂದೆ ಆದದ್ದು ಹೀಗೆ....
ಮಂಗಳೂರು: ಮಂಗಳೂರಿನ ಪ್ರಮುಖ ನಾಲ್ಕು ಬೀಚ್ ಗಳಲ್ಲಿ ಇಂದು ರಾತ್ರಿ ಮೋಜು ಮಾಡಲು ಬಂದವರು ಎಣ್ಣೆ ತೆಗೆದುಕೊಳ್ಳುತ್ತಿದ್ದಂತೆ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿರುವ ಶಶಿಕುಮಾರ್ ಅವರು ರಾತ್ರಿ ಹೊತ್ತಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದು ಈಗಾಗಲೆ ಮೈದಾನ, ಬಸ್ ಸ್ಟ್ಯಾಂಡ್ ನಲ್ಲಿ ಮದ್ಯ ಸೇವಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಇಂದು ಸೂರ್ಯಾಸ್ತವಾಗಿ ಕತ್ತಲೆ ಕವಿಯುತ್ತಿದ್ದಂತೆ ಮಂಗಳೂರಿನ ತಣ್ಣೀರು ಬಾವಿ, ಪಣಂಬೂರು, ಸುರತ್ಕಲ್, ಸೋಮೇಶ್ವರ ಬೀಚ್ ಗಳಿಗೆ ಪೊಲೀಸರು ದಾಳಿ ಮಾಡಿದ್ದಾರೆ. ಕತ್ತಲಾಗುತ್ತಿದ್ದಂತೆ ಕಿಕ್ ತೆಗೆಯಲು ಬಂದಿದ್ದ ಸುಮಾರು 70 ಮಂದಿ ಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಲ್ಲಿ 65 ಕ್ಕೂ ಅಧಿಕ ಮಂದಿ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದರಲ್ಲಿ ಒಂದು ಗಾಂಜಾ ಪ್ರಕರಣ ಪತ್ತೆಯಾಗಿದ್ದು ಚಾಕಲೇಟ್ ಮಿಶ್ರಣ ಮಾಡಿ ಟ್ಯಾಬ್ಲಟ್ ರೂಪದಲ್ಲಿ ಗಾಂಜವನ್ನು ಮಾರಾಟ ಮಾಡಲು ಬಂದಿದ್ ವ್ಯಕ್ತಿಯು ಸೆರೆಯಾಗಿದ್ದು ಆತನ ವಿರುದ್ದ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ