ಇದು ಮಂಗಳೂರಿನಲ್ಲಿ ನಡೆದ ಘಟನೆ-ಮದುವೆಯಾದ ಮೂರೆ ದಿನದಲ್ಲಿ 21 ವರ್ಷದ ಯುವತಿ ಪ್ರಿಯಕರನೊಂದಿಗೆ ಪರಾರಿ: ಪಲ್ಸರ್ ಬೈಕ್ ನಲ್ಲಿ ....
ಮಂಗಳೂರು: ಮದುವೆಯಾದ ಮೂರೆ ದಿನದಲ್ಲಿ ವಧು ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಮೂಲ್ಕಿಯ ಲಿಂಗಪ್ಪಯ್ಯ ಕಾಡು ಬಳಿಯಲ್ಲಿ ಈ ಘಟನೆ ನಡೆದಿದೆ. ಡಿಸೆಂಬರ್ 28 ರಂದು ಲಿಂಗಪ್ಪಯ್ಯ ಕಾಡಿನ ನಿವಾಸಿ ವಧುವಿಗೆ ಶಿಕ್ಷಕನ ಜೊತೆಗೆ ಪುನರೂರಿನ ಮದುವೆ ಸಭಾಂಗಣದಲ್ಲಿ ಮದುವೆ ನಡೆದಿತ್ತು. ಮದುವೆ ಶಾಸ್ತ್ರ ಪ್ರಕಾರ ಮದುವೆಯಾದ ಮೂರು ದಿನದ ಬಳಿಕ ವಧು ವರ ನ ಮನೆಗೆ ಹೋಗಬೇಕಾಗಿದೆ. ಆದರೆ ವರನ ಮನೆಗೆ ಹೋಗುವ ಮುನ್ನಾದಿನ ಯುವತಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈಕೆಯ ಪ್ರಿಯಕರ ಪಲ್ಸರ್ ಬೈಕ್ ನಲ್ಲಿ ಈಕೆಯ ಮನೆಯ ಗೇಟಿನವರೆಗೆ ಬಂದಿದ್ದಾನೆ. ಮನೆಯ ಹೊರಗೆ ಬಂದ ಈಕೆ ಆತನೊಂದಿಗೆ ಪರಾರಿಯಾಗಿದ್ದಾಳೆ.
ಘಟನೆಯಿಂದ ವರನ ತಂದೆ ಅಸ್ವಸ್ಥ
ಮಗನ ಮದುವೆಯಾದ ಹುಡುಗಿ ನಾಪತ್ತೆಯಾಗಿರುವ ವಿಚಾರ ತಿಳಿದ ವರನ ತಂದೆ ಅಸ್ವಸ್ಥರಾಗಿದ್ದಾರೆ. ತನ್ನ ಪುತ್ರನ ವೈವಾಹಿಕ ಜೀವನ ಹೀಗಾಯಿತಲ್ಲ ಎಂದು ಮನನೊಂದ ಅವರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ