ದಕ್ಷಿಣ ಕನ್ನಡದಲ್ಲಿ 21 ವರ್ಷದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
Monday, January 4, 2021
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ 21 ವರ್ಷದ ಯುವತಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉದ್ಯಮಿ ನೆಲ್ಯಾಡಿ ವಿ.ಜೆ.ಜೋಸೆಫ್ ಎಂಬವರ ಪುತ್ರಿ ನವ್ಯಾ ಜೋಸೆಫ್ (21)ಆತ್ಮಹತ್ಯೆ ಮಾಡಿಕೊಂಡವರು.
ನವ್ಯಾ ಜೋಸೆಫ್ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿದ ಬಳಿಕ ಮನೆಯಲ್ಲಿದ್ದರು. ನಿನ್ನೆ ರಾತ್ರಿ ಸುಮಾರು 10:30ರ ವೇಳೆಗೆ ತನ್ನ ಕೊಠಡಿಯೊಳಗೆ ಮಲಗಿದ್ದ ನವ್ಯಾ ಜೋಸೆಫ್ ಇಂದು ಬೆಳಿಗ್ಗೆ 8 ಗಂಟೆಯಾದರೂ ಬಾಗಿಲು ತೆರೆದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಮೊಬೈಲ್‌ಗೆ ಕರೆಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ತಂದೆ ವಿ.ಜೆ.ಜೋಸೆಫ್‌ರವರು ಬಾಗಿಲು ಮುರಿದು ಒಳಪ್ರವೇಶಿಸಿದ ವೇಳೆ ನವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ನವ್ಯಾ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.