ಹಲೋ ನಿಮಗೆ ಕ್ರಿಸ್ಮಸ್ ಗಿಪ್ಟ್ ಕೊಡ್ತೇನೆ ಅಂತ ಮಂಗಳೂರಿನ ವ್ಯಕ್ತಿಗೆ 1.29 ಲಕ್ಷ ಪಂಗನಾಮ
Thursday, January 7, 2021
ಮಂಗಳೂರು; ಕ್ರಿಸ್ಮಸ್ ಗಿಪ್ಟ್ ಕೊಡ್ತೇನೆ ಅಂತ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.29 ಲಕ್ಷ ರೂ ಪಂಗನಾಮ ಹಾಕಿದ ಘಟನೆ ವರದಿಯಾಗಿದೆ.
ಮಂಗಳೂರಿನ ವ್ಯಕ್ತಿಯ ಮೊಬೈಲ್ ನಂಬ್ರಕ್ಕೆ ಡಿಸೆಂಬರ್ 15 ರಂದು +44748290281 ನಂಬರ್ ನಿಂದ ಕರೆ ಬಂದಿತ್ತು. ಕರೆಮಾಡಿದವ ತಾನು ನೆಲ್ಸನ್ ವಿಲಿಯಮ್ಸ್ ಎಂದು ಪರಿಚಯಿಸಿಕೊಂಡಿದ್ದ. ಅಪರಿಚಿತ ಕರೆ ಮಾಡಿ ಮಂಗಳೂರಿನ ವ್ಯಕ್ತಿಗೆ ಕ್ರಿಸ್ ಮಸ್ ಉಡುಗೊರೆ ಕೊಡುವುದಾಗಿ ತಿಳಿಸಿದ್ದ. ಅದರೆ ಮಂಗಳೂರು ವ್ಯಕ್ತಿ ಗಿಪ್ಟ್ ಬೇಡ ಎಂದು ಹೇಳಿದ್ದರು.
ಆದರೆ ಡಿಸೆಂಬರ್ 21 ರಂದು 9821814383 ನಂಬರ್ ನಿಂದ ಕರೆ ಮಾಡಿದ ವ್ಯಕ್ತಿ ತನ್ನನ್ನು ಕಸ್ಟಮ್ ಅಧಿಕಾರಿಗಳೆಂದು ನಂಬಿಸಿದ್ದಾನೆ. ನೆಲ್ಸನ್ ವಿಲಿಯಮ್ಸ್ ಎಂಬುವವರು ನಿಮಗೆ ಉಡುಗೊರೆ ಕಳುಹಿಸಿದ್ದು ಉಡುಗೊರೆಯನ್ನು ಬಿಡಿಸಿಕೊಳ್ಳಲು ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇವರ ಮಾತು ನಂಬಿದ ಮಂಗಳೂರು ವ್ಯಕ್ತಿ ಆತನ ಖಾತೆಗೆ ಒಟ್ಟು ರೂ.1,29,300/- ಗಳನ್ನು ಹಾಕಿದ್ದಾರೆ. ಕೊನೆಗೆ ಇದೊಂದು ಮೋಸ ಎಂದು ಅರಿವಾದ ಅವರು ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.