4 ವರ್ಷದ ಬಳಿಕ ಒಟ್ಟಾಗಿ ನಟಿಸಿದ ಯಶ್ ರಾಧಿಕ- ಗಂಡ ಹೆಂಡತಿಯಾದ ಬಳಿಕ ಮೊದಲ ನಟನೆ ಸಿನಿಮಾದಲ್ಲಲ್ಲ!
(ಗಲ್ಪ್ ಕನ್ನಡಿಗ)ಬೆಂಗಳೂರು: ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಾದ ಯಶ್ ಮತ್ತು ರಾಧಿಕ ಪಂಡಿತ್ ಮದುವೆಯ ಬಳಿಕ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಮತ್ತೆ ಒಟ್ಟಾಗಿ ನಟಿಸುವ ಕಾಲ ಕೂಡಿ ಬಂದಿದೆ. ಆದರೆ ಸಿನಿಮಾದಲ್ಲಿ ಅಲ್ಲ ಎನ್ನುವುದು ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.
(ಗಲ್ಪ್ ಕನ್ನಡಿಗ)ಮದುವೆಯ ಮುಂಚೆ ಈ ಜೋಡಿ ಮೊಗ್ಗಿನ ಮನಸು, ಮಿಸ್ಟರ್ ಆಂಡ್ ಮಿಸ್ಟರ್ ರಾಮಾಚಾರಿ, ಡ್ರಾಮ ಮತ್ತು ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಈ ಜೋಡಿ ಮತ್ತೆ ಒಟ್ಟಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು.
(ಗಲ್ಪ್ ಕನ್ನಡಿಗ)ಈ ಜೋಡಿ ಇದೀಗ ಒಟ್ಟಾಗಿ ಜಾಹೀರಾತುವೊಂದಕ್ಕೆ ನಟಿಸುತ್ತಿದೆ. ಗಂಡಹೆಂಡತಿಯಾದ ಬಳಿಕ ಒಟ್ಟಾಗಿ ನಟಿಸಲು ಅವರಿಗೆ ಸಿಕ್ಕಿರುವ ಅವಕಾಶವದು. ಫ್ರೀಡಂ ಸನ್ ಪ್ಲವರ್ ಆಯಿಲ್ ನ ರೂಪದರ್ಶಿಯರಾಗಿ ಯಶ್ ಮತ್ತು ರಾಧಿಕ ಒಟ್ಟಾಗಿ ನಟಿಸುತ್ತಿದ್ದಾರೆ.
(ಗಲ್ಪ್ ಕನ್ನಡಿಗ)
I feel Grrrrrreat!! Just as fitness plays a vital role in my life, the quality, hygiene and taste of the food we have, matters the most. Radhika and I have shifted to Freedom Sunflower oil which is now an integral part of our diet.@FreedomOil_In #SwitchToFreedom pic.twitter.com/HR7IVA8Hn6
— Yash (@TheNameIsYash) December 17, 2020