ಪುತ್ತೂರಿನಲ್ಲಿ ಬೈಕ್ ಅಪಘಾತ: ಆರ್ ಎಸ್ ಎಸ್ ಪ್ರಮುಖ್ ಮೃತ್ಯು
Tuesday, December 15, 2020
(ಗಲ್ಫ್ ಕನ್ನಡಿಗ)ಮಂಗಳೂರು: ಪುತ್ತೂರಿನ ಪೊಳ್ಯದಲ್ಲಿ ನಡೆದ ಬೈಕ್ ಅಪಘಾತ ಪ್ರಕರಣದಲ್ಲಿ ಆರ್ ಎಸ್ ಎಸ್ ಮುಖಂಡರೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ) ಆರ್ ಎಸ್ ಎಸ್ ಬ ಗ್ರಾಮವಿಕಾಸ ಮಂಗಳೂರು ವಿಭಾಗದ ಪ್ರಮುಖ್ ಆಗಿರುವ ವೆಂಕಟ್ರಮಣ ಹೊಳ್ಳ ಮ್ರತಪಟ್ಟವರು. ಇವರು ಬಂಟ್ವಾಳ ಅಗರ್ತಬೈಲು ನಿವಾಸಿಯಾಗಿದ್ದಾರೆ.
(ಗಲ್ಫ್ ಕನ್ನಡಿಗ)ಪುತ್ತೂರು ಪೊಲೀಸ್ ವಸತಿ ಗೃಹಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದ ಅವರು ಮುಂಜಾನೆ 5 ಗಂಟೆಯ ಸುಮಾರಿಗೆ ಬಂಟ್ವಾಳದ ಮನೆಗೆ ಬೈಕ್ ನಲ್ಲಿ ತೆರಳುವ ವೇಳೆ ಈ ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ)ಪೋಳ್ಯ ಸಮೀಪದ ಪೊಲೀಸ್ ಬ್ಯಾರಿಕೇಡ್ ಬಳಿ ಈ ಅಪಘಾತ ಸಂಭವಿಸಿದೆ. ವೆಂಕಟರಮಣ ಹೊಳ್ಳ ಅವರ ಮೃತ ದೇಹ ಘಟನೆಯ ತುಸು ದೂರ ಬಿದ್ದಿದ್ದು ಅವರ ತಲೆ ಜಜ್ಜಿ ಹೋಗಿದೆ. ವೆಂಕಟರಮಣ ಹೊಳ್ಳ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಬೇರೆ ಯಾವುದೋ ವಾಹನ ಡಿಕ್ಕಿಯಾಗಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಪುತ್ತೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)