ಚುನಾವಣೆಗೆ ಮುಂಚೆಯೆ ಪುತ್ತೂರಿನಲ್ಲಿ ನಡೆಯಿತು ಆಪರೇಷನ್ ಕಮಲ:ಕಾಂಗ್ರೆಸ್ ಅಭ್ಯರ್ಥಿಯ ಹೈಜಾಕ್
(ಗಲ್ಪ್ ಕನ್ನಡಿಗ)ಮಂಗಳೂರು: ಗ್ರಾಮಪಂಚಾಯತ್ ಚುನಾವಣೆ ಕಾವೇರುತ್ತಿದ್ದಂತೆ ಪಕ್ಷಾಂತರಗಳು ಅಷ್ಟೆ ವೇಗವಾಗಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಪಕ್ಷಾಂತರಗಳು ಸಾಮಾನ್ಯವಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಯೆ ಪಕ್ಷಾಂತರ ವಾಗುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
(ಗಲ್ಪ್ ಕನ್ನಡಿಗ)ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಿತಾ ಕೂವೆಂಜ ನಾಮಪತ್ರ ಸಲ್ಲಿಸಿದ್ದರು. ಕಳೆದ ಬಾರಿಯ ತಾಲೂಕು ಪಂಚಾಯತ್ ಚುನಾವಣೆಯಲ್ಲಿಯೂ ಅನಿತಾ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಈ ಬಾರಿಯು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಇಂದು ಮುಂಜಾನೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡ ಅವರನ್ನು ಶಾಸಕ ಸಂಜೀವ ಮಠಂದೂರು ಅವರು ಪಕ್ಷಕ್ಕೆ ಧ್ವಜ ನೀಡಿ ಸೇರ್ಪಡೆಗೊಳಿಸಿದರು.
(ಗಲ್ಪ್ ಕನ್ನಡಿಗ)ಅನಿತಾ ಕೂವೆಂಜ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವಾಗ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂಬುದು ಮಾತ್ರ ನಿಗೂಡವಾಗಿದೆ
(ಗಲ್ಪ್ ಕನ್ನಡಿಗ)