ಪರಿಚಿತ ವ್ಯಕ್ತಿಯ ಅಪ್ರಾಪ್ತ ಮಗಳಿಗೆ ಕಣ್ಣು ಹಾಕಿದ ಕಾಮುಕ: ಸೈಕಲ್ ಕಲಿಸುವುದಾಗಿ ಹೇಳಿ ಅತ್ಯಾಚಾರ
Monday, December 14, 2020
ಮಂಗಳೂರು: ಅಪ್ರಾಪ್ತ ಬಾಲಕಿಗೆ ಸೈಕಲ್ ಕಲಿಸಿಕೊಡುವುದಾಗ ಕರೆದುಕೊಂಡು ಹೋಗಿ ಅತ್ಯಾಚಾರ ವೆಸಗಿದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನಡೆದಿದೆ.
ಸುಳ್ಯ ದೇವಚಳ್ಳ ಗ್ರಾಮದ ನಿವಾಸಿ ಅನಿಲ್ ಖಾಸಗಿ ಶಾಲೆಯೊಂದರ ಉದ್ಯೋಗಿಯಾಗಿದ್ದಾನೆ. ಈತ ತನಗೆ ಪರಿಚಿತ ವ್ಯಕ್ತಿಯೊಬ್ಬರ ಮಗಳಿಗೆ ಸೈಕಲ್ ಕಲಿಸುವುದಾಗಿ ಹೇಳಿ ಶಾಲೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.
ಅತ್ಯಾಚಾರಗೊಳಗಾದ ಬಾಲಕಿ ದೈಹಿಕವಾಗಿ ಬಳಲಿದ್ದನ್ನು ಕಂಡ ತಾಯಿ ವಿಚಾರಿಸಿದಾಗ ಅತ್ಯಾಚಾರ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ