
ಬೆತ್ತಲೆ ವಿಡಿಯೋ ಕಾಲ್ ಮಾಡಿ ಇನ್ಸ್ ಪೆಕ್ಟರ್ ಖೆಡ್ಡಾಗೆ ಬೀಳಿಸಲು ಯುವತಿಯ ತಂತ್ರ
(ಗಲ್ಪ್ ಕನ್ನಡಿಗ)ಬೆಂಗಳೂರು: ಯುವತಿಯೊಬ್ಬಳು ವಾಟ್ಸಪ್ ನಲ್ಲಿ ಬೆತ್ತಲೆ ವಿಡಿಯೋ ಕಾಲ್ ಮಾಡಿ ಇನ್ಸ್ ಪೆಕ್ಟರ್ ವೊಬ್ಬರನ್ನು ಖೆಡ್ಡಾಗೆ ಬೀಳಿಸಲು ತಂತ್ರ ಹೂಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
(ಗಲ್ಪ್ ಕನ್ನಡಿಗ)ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ ಪೆಕ್ಟರ್ ದಯಾನಂದ ಅವರನ್ನು ಯವತಿಯೊಬ್ಬಳು ವಂಚಿಸಲು ಪ್ರಯತ್ನಿಸಿದ್ದು ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರಿಗೆ ಡಿಸೆಂಬರ್ ಎಂಟರಂದು ರಾತ್ರಿ ಅಪರಿಚಿತ ಮೊಬೈಲ್ ನಂಬರ್ ನಿಂದ ವಾಟ್ಸಪ್ ನಲ್ಲಿ ವಿಡಿಯೋ ಕರೆಯೊಂದು ಬಂದಿತ್ತು. ಅದನ್ನು ಸ್ವೀಕರಿಸಿದಾಗ ಯುವತಿಯೊಬ್ಬಳು ಆಕೆಯ ಅಶ್ಲೀಲ ವಿಡಿಯೋವನ್ನು ತೋರಿಸುತ್ತಿದ್ದಳು. ಕೂಡಲೇ ಇನ್ಸ್ ಪೆಕ್ಟರ್ ವಿಡಿಯೋ ಕಟ್ ಮಾಡಿದ್ದಾರೆ.
(ಗಲ್ಪ್ ಕನ್ನಡಿಗ)ಆದರೆ ಯುವತಿ ವಿಡಿಯೋ ಕರೆಯ ಸ್ಕ್ರೀನ್ ಶಾಟ್ ತೆಗೆದು ಇನ್ಸ್ ಪೆಕ್ಟರ್ ಅವರ ವಾಟ್ಸಪ್ ಗೆ ಕಳುಹಿಸಿ 11 ಸಾವಿರ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾಳೆ. ಹಣ ಕೊಡದಿದ್ದರೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ಸ್ನೇಹಿತರಿಗೆ ಕಳುಹಿಸಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
(ಗಲ್ಪ್ ಕನ್ನಡಿಗ)