ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ: ಪ್ರಿಯಕರನಿಗೆ ಪತಿಯನ್ನು ಮುಗಿಸಲು ಆದೇಶ ನೀಡಿದ 24 ರ ಚೆಲುವೆ
(ಗಲ್ಪ್ ಕನ್ನಡಿಗ)ಮೈಸೂರು: ತಮ್ಮ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆಂದು ಪ್ರಿಯಕರಿಗೆ ಪತಿಯನ್ನು ಮುಗಿಸಲು ಆದೇಶ ನೀಡಿ 24 ರ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರ ಜೈಲು ಸೇರಿದ್ದಾರೆ.
(ಗಲ್ಪ್ ಕನ್ನಡಿಗ)ಮೈಸೂರಿನ ಸೌಮ್ಯ ಎಂಬ 24 ವರ್ಷದ ವಿವಾಹಿತ ಮಹಿಳೆ ಈ ಖತರ್ನಾಕ್ ಪ್ಲ್ಯಾನ್ ಮಾಡಿದವಳು. ಈಕೆ ಮದುವೆಯಾದ ಹೊಸತರಲ್ಲಿ ಪತಿ ಶಿವರಾಜ್ ಜೊತೆಗೆ ಅನೋನ್ಯವಾಗಿ ಸಂಸಾರ ನಡೆಸುತ್ತಿದ್ದಳು. ಇದರ ನಡುವೆ ಈಕೆ ಶುಂಠಿ ಕೆಲಸಕ್ಕೆಂದು ಹೋಗುತ್ತಿದ್ದಳು. ಈಕೆ ಪ್ರತಿದಿನ ಯೋಗೀಶ್ ಎಂಬವನ ಅಟೋ ರಿಕ್ಷಾದಲ್ಲಿ ಶುಂಠಿ ಕೆಲಸಕ್ಕೆ ಹೋಗುತ್ತಿದ್ದು ಈ ವೇಳೆ ಆತನ ಜೊತೆಗೆ ಸಲುಗೆ ಬೆಳೆದಿದೆ. ಬಳಿಕ ಇವರಿಬ್ಬರು ಅಕ್ರಮ ಸಂಬಂಧವನ್ನು ಹೊಂದಿದ್ದರು.
(ಗಲ್ಪ್ ಕನ್ನಡಿಗ)ಯೋಗಿಶ್ ಜೊತೆಗೆ ಪತ್ನಿ ಗೆ ಸಂಬಂಧ ಇರುವುದನ್ನು ತಿಳಿದುಕೊಂಡ ಶಿವರಾಜ್ ಆಕೆಗೆ ಶುಂಠಿ ಕೆಲಸಕ್ಕೆ ಹೋಗದಂತೆ ತಾಕೀತು ಮಾಡಿದ್ದ. ಇದರಿಂದ ಪ್ರಿಯಕರನಿಂದ ದೂರವಾಗುವ ಆತಂಕದಲ್ಲಿ ಈಕೆ ತನ್ನ ಪತಿಯನ್ನು ಕೊಲೆ ಮಾಡುವಂತೆ ಪ್ರಿಯಕರನಿಗೆ ಆದೇಶ ಮಾಡಿದ್ದಾಳೆ.
(ಗಲ್ಪ್ ಕನ್ನಡಿಗ)ಪ್ರಿಯತಮೆಯ ಆದೇಶದಂತೆ ಯೋಗೀಶ್ ಡಿಸೆಂಬರ್ ಏಳರಂದು ಶಿವರಾಜ್ ಗೆ ಕಂಠಪೂರ್ತಿ ಕುಡಿಸಿ ಕೈಕಾಲುಗಳನ್ನು ಕಟ್ಟಿ ನಾಲೆಯಲ್ಲಿ ಎಸೆದಿದ್ದರು. ಡಿಸೆಂಬರ್ 16 ರಂದು ಮೃತದೇಹ ಅಡಹಳ್ಳಿ ಗ್ರಾಮದ ಕಬಿನಿ ಬಲದಂಡೆ ಪತ್ತೆಯಾಗಿತ್ತು. ಶಿವರಾಜ್ ನಾಪತ್ತೆಯಾಗಿ ಒಂದು ವಾರ ಕಳೆದರೂ ದೂರು ದಾಖಲಿಸದ ಪತ್ನಿಯ ವಿಚಾರಣೆ ಮಾಡಿದಾಗ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಮ್ಯ, ಯೋಗೀಶ ಮತ್ತು ಕೊಲೆಗೆ ಸಹಕಾರ ನೀಡಿದ ಸ್ನೇಹಿತ ಚೆಲುವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ
(ಗಲ್ಪ್ ಕನ್ನಡಿಗ)