
ಚಂದಕ್ಕಿಂತ ಚಂದ ಯಶ ಶಿವಕುಮಾರ್: ಮುದ್ದಾದ ಪೋಟೋ ನೋಡಿ!
Tuesday, December 8, 2020
ಕನ್ನಡ ಚಿತ್ರರಂಗದಲ್ಲಿ ಚಂದಕ್ಕಿಂತ ಚಂದ ಅನ್ನುವ ರೀತಿಯಲ್ಲಿ ಯಶ ಶಿವಕುಮಾರ್ ಮೋಡಿ ಮಾಡುತ್ತಿದ್ದಾರೆ. ಹರಿಪ್ರಸಾದ್ ಜಯಣ್ಣ ಅವರ ನಿರ್ದೇಶನದ ಪದವಿ ಪೂರ್ವ ಸಿನಿಮಾದಲ್ಲಿ ನಾಯಕಿಯಾಗಿದ್ದ ಯಶ ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.
ವಿಜಯ್ ಮಿಲ್ಟನ್ ನಿರ್ದೇಶನದ ಶಿವಪ್ಪ ಸಿನಿಮಾಗೆ ಇವರು ನಾಯಕಿ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರಿಗೆ ಅಂಜಲಿ ನಾಯಕಿಯಾಗಿದ್ದರೆ ಧನಂಜಯ ಅವರಿಗೆ ಯಶ ಜೋಡಿಯಾಗಿ ನಟಿಸಲಿದ್ದಾರೆ. ಶಿವಪ್ಪ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದದು ಡಿಸೆಂರ್ ಎಂಟರಿಂದ ಮತ್ತೊಂದು ಹಂತದ ಚಿತ್ರೀಕರಣ ಆರಂಭವಾಗಲಿದೆ.