ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳ ಮದುವೆ, ಟಿಸಿ ನೀಡಿದ ಪ್ರಿನ್ಸಿಪಾಲ್ ಪ್ರಕರಣ: ಆ ಬಳಿಕ ಸಿಕ್ಕಿತು ಘಟನೆಗೆ ಮತ್ತೊಂದು ಟ್ವಿಸ್ಟ್!
(ಗಲ್ಪ್ ಕನ್ನಡಿಗ)ಇತ್ತೀಚೆಗೆ ಅಂದ್ರಪ್ರದೇಶದ ವಿದ್ಯಾರ್ಥಿ ಜೋಡಿಗಳಿಬ್ಬರು ಕ್ಲಾಸ್ ರೂಮಿನಲ್ಲಿ ಮದುವೆಯಾಗಿದ್ದ ಸುದ್ದಿಯನ್ನು ನೀವು ಓದಿದ್ದೀರಿ. ಮದುವೆಯಾದ ಬಳಿಕ ಸುದ್ದಿ ವೈರಲ್ ಆಗಿ ಆ ಶಾಲೆಯ ಪ್ರಾಂಶುಪಾಲರು ಇಬ್ಬರಿಗೂ ಟಿ ಸಿ ಕೊಟ್ಟು ಮನೆಗೆ ಕಳುಹಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
(ಗಲ್ಪ್ ಕನ್ನಡಿಗ)ಆಂದ್ರಪ್ರದೇಶದ ರಾಜಮಂಡ್ರಿಯಲ್ಲಿ ಕ್ಲಾಸ್ ರೂಮಿನಲ್ಲಿಯೆ ವಿದ್ಯಾರ್ಥಿಗಳು ಮದುವೆಯಾಗಿದ್ದರು. ನವೆಂಬರ್ ತಿಂಗಳ 17 ರಂದು ಕ್ಲಾಸ್ ರೂಮಿನಲ್ಲಿ ನಡೆದ ಮದುವೆಯಲ್ಲಿ ಬಾಲಕ ಬಾಲಕಿಗೆ ಮಂಗಳ ಸೂತ್ರ ಕಟ್ಟಿ ಹಣೆಗೆ ಸಿಂಧೂರ ಹಚ್ಚಿದ್ದ. ಈ ಮದುವೆಯನ್ನು ಬಾಲಕಿಯ ಸ್ನೇಹಿತೆ ವಿಡಿಯೋ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಂಡ ಪರಿಣಾಮ ವೈರಲ್ ಆಗಿತ್ತು.
(ಗಲ್ಪ್ ಕನ್ನಡಿಗ)ಈ ಬಾಲಕ ಬಾಲಕಿಯರ ಮದುವೆ ಇದೀಗ ಅಮಾನ್ಯವಾಗಿದೆ. ಇವರಿಬ್ಬರಿಗೆ 17 ವರ್ಷ ಆಗಿರುವುದರಿಂದ ಮದುವೆಗೆ ಕಾನೂನಿನಡಿ ಯಾವುದೇ ಮಾನ್ಯತೆ ಇಲ್ಲದಿರುವುದರಿಂದ ಅಧಿಕಾರಿಗಳು ಮದುವೆಯನ್ನು ಅಮಾನ್ಯ ಮಾಡಿದ್ದಾರೆ. ಕಾನೂನು ವಿರುದ್ದ ವಾಗಿ ಮದುವೆಯಾದ ಇವರಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಬಾಲಕಿಯನ್ನು ಮನೆಗೆ ಸೇರಿಸಲು ಮನೆಯವರು ಒಪ್ಪದ ಕಾರಣ ಆಕೆಗೆ ಮಕ್ಕಳ ಆಯೋಗದಲ್ಲಿ ಆಶ್ರಯ ಕಲ್ಪಿಸಲಾಗಿದೆ.
(ಗಲ್ಪ್ ಕನ್ನಡಿಗ)ಈ ವಿದ್ಯಾರ್ಥಿ ಜೋಡಿಗೆ ಶಾಲೆಯಲ್ಲೂ ಪ್ರವೇಶವಿಲ್ಲ. ಮನೆಯಲ್ಲಿಯೂ ಪ್ರವೇಶವಿಲ್ಲದಂತಾಗಿದೆ. ಸಾಲದಕ್ಕೆ ಕಾನೂನು ವಿರೋಧಿ ಮದುವೆಯಾಗಿದ್ದಕ್ಕೆ ಕೋರ್ಟ್ ಗೂ ಅಲೆಯುವಂತಹ ಪರಿಸ್ಥಿತಿ ಬಂದಿದೆ.
(ಗಲ್ಪ್ ಕನ್ನಡಿಗ)