ವಿದೇಶದಿಂದ ಬಂದು ಕರ್ನಾಟಕದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ- ನಾಲ್ವರು ವಿದೇಶಿ ಯುವತಿಯರ ರಕ್ಷಣೆ
Thursday, December 10, 2020
(ಗಲ್ಪ್ ಕನ್ನಡಿಗ)
ಬೆಂಗಳೂರು: ವಿದೇಶದಿಂದ ಬಂದು ಕರ್ನಾಟಕದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)
ಉಗಾಂಡ ದೇಶದ ಮಹಿಳೆ ನಕ್ಕಾಜಿ ಫೈನಾಹ ಬೆಂಗಳೂರಿನ ರಾಮಮೂರ್ತಿ ನಗರದ ಸಮೀಪದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಈಕೆಗೆ ಇವಳ ಸ್ನೇಹಿತ ಬೆಂಗಳೂರಿನ ರಾಮಮೂರ್ತಿ ನಗರದ ಫೈಜಲ್ ಅಹಮದ್ ಸಹಕಾರ ಕೊಡುತ್ತಿದ್ದ. ವರ್ಷದ ಹಿಂದೆ ಬಾಡಿಗೆ ಮನೆ ಪಡೆದು ಇವರು ವೇಶ್ಯಾವಾಟಿಕೆ ನಡೆಸುತ್ತಿದ್ದರು. ನಕ್ಕಾಜಿ ಪ್ರವಾಸಿ ವೀಸಾದಡಿ ಬಂದು ವೇಶ್ಯಾವಾಟಿಕೆ ನಡೆಸುತ್ತಿದ್ದಳು. ದಾಳಿ ವೇಳೆ ನಾಲ್ವರು ವಿದೇಶಿ ಯುವತಿಯರನ್ನು ರಕ್ಷಿಸಲಾಗಿದೆ
(ಗಲ್ಪ್ ಕನ್ನಡಿಗ)