ಇಂಟರ್ನ್ ಶಿಪ್ ಗಾಗಿ ಬಂದ ಕಾಲೇಜು ವಿದ್ಯಾರ್ಥಿನಿಗೆ ಮತ್ತು ಬರಿಸಿ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ: ಕಾನೂನು ಕಾಲೇಜಿನಿಂದ ವಿದ್ಯಾರ್ಥಿ ಡಿಬಾರ್
(ಗಲ್ಪ್ ಕನ್ನಡಿಗ)ಬೆಂಗಳೂರು: ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬ ಇಂಟರ್ನ್ ಶಿಪ್ ಗಾಗಿ ಬಂದ ವಿದ್ಯಾರ್ಥಿನಿಗೆ ಮತ್ತು ಬರಿಸಿ ಪ್ರಜ್ಞೆಯನ್ನು ತಪ್ಪಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿಯನ್ನು ಡಿಬಾರ್ ಮಾಡಿದೆ.
(ಗಲ್ಪ್ ಕನ್ನಡಿಗ)ರಾಜ್ಯದ ಒಂದು ಪ್ರತಿಷ್ಠಿತ ಕಾನೂನು ಕಾಲೇಜಿನಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿಯನ್ನು ಡಿಬಾರ್ ಮಾಡುವ ಮೂಲಕ ಇಂತಹ ಕೃತ್ಯ ಮಾಡುವವರ ವಿರುದ್ದ ಕಠಿಣ ಕ್ರಮದ ಸಂದೇಶ ನೀಡಿದೆ.
ರಿಹಾನ್ ಗುಪ್ತಾ ಎಂಬ ವಿದ್ಯಾರ್ಥಿ ಈ ಕೃತ್ಯವೆಸಗಿದ್ದು ಇದೀಗ ಡಿಬಾರ್ ಆಗಿದ್ದಾನೆ. ಉತ್ತರ ಭಾರತದ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಇಂಟರ್ನ್ ಶಿಪ್ ಗಾಗಿ ರಾಜ್ಯದ ಕಾನೂನು ಕಾಲೇಜಿಗೆ ಬಂದಿದ್ದಳು. ಕೊರೊನ ವೈರಸ್ ಹಾವಳಿಗೆ ಮುನ್ನ ಈ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮದ್ಯ ಸೇವನೆ , ಮೋಜು ಮಸ್ತಿಯು ನಡೆದಿದೆ.
(ಗಲ್ಪ್ ಕನ್ನಡಿಗ)ರಿಹಾನ್ ಗುಪ್ತಾ ಈ ವಿದ್ಯಾರ್ಥಿನಿಗೆ ಮತ್ತು ಬೆರಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಬಳಿಕ ಕಾಲೇಜಿನ ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಓಡಾಟವಿದ್ದ ಕಾರಣ ಹೊರಗೆ ಕೆದುಕೊಂಡು ಹೋಗಲಾಗದೆ ಅಲ್ಲಿಯೆ ಕುರ್ಚಿಯೊಂದರ ಮೇಲೆ ಕೂರಿಸಿ ನಾಪತ್ತೆಯಾಗಿದ್ದಾನೆ. ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಕಂಡ ಇತರ ವಿದ್ಯಾರ್ಥಿಗಳು ಆಕೆಯನ್ನು ಆರೈಕೆ ಮಾಡಿದ್ದರು. ವಿದ್ಯಾರ್ಥಿನಿ ಮರುದಿನ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದ್ದು ಕಾಲೇಜಿನ ಮುಖ್ಯಸ್ಥರಿಗೆ ದೂರು ನೀಡಿದ್ದಳು. ಕೂಡಲೇ ಕಾಲೇಜಿನಿಂದ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ವಿಚಾರಣಾ ಸಮಿತಿ ವಿಚಾರಣೆ ನಡೆಸಿ ಸಿಸಿ ಕ್ಯಾಮರದಲ್ಲಿ ದಾಖಲಾದ ಸಾಕ್ಷ್ಯ ಮತ್ತು ವಿದ್ಯಾರ್ಥಿಗಳ ಹೇಳಿಕೆಗಳನ್ನು ಪಡೆದುಕೊಂಡಿದೆ. ಈತ ಲೈಂಗಿಕ ದೌರ್ಜನ್ಯವೆಸಗಿರುವುದು ಸಾಬೀತಾಗಿರುವುದರಿಂದ ಸಮಿತಿಯು ಕುಲಪತಿಗೆ ವರದಿ ನೀಡಿ ವಿದ್ಯಾರ್ಥಿಯನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಿದೆ.
(ಗಲ್ಪ್ ಕನ್ನಡಿಗ)ವಿದ್ಯಾರ್ಥಿಯ ತಂದೆ ವಕೀಲರಾಗಿದ್ದು ಪಂಜಾಬ್ ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ವಿದ್ಯಾರ್ಥಿಯ ಪೋಷಕರು ಪ್ರಕರಣ ಮುಚ್ಚಿಹಾಕಲು ಸಾಕಷ್ಟು ಪ್ರಯತ್ನ ನಡೆಸದ್ದರು ಎಂದು ತಿಳಿದುಬಂದಿದೆ.
(ಗಲ್ಪ್ ಕನ್ನಡಿಗ)