ಮೈಸೂರಿನಿಂದ ಮಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಬಂತು ವಿಶೇಷ ಅಂಚೆ ಲಕೋಟೆ!
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರು ಮತ್ತು ಮೈಸೂರು ನಡುವೆ ಇಂದಿನಿಂದ ವಿಮಾನ ಆರಂಭವಾಗಿದೆ. ಬಂದರು ನಗರಿಯೊಂದಿಗೆ ಸಾಂಸ್ಕೃತಿಕ ನಗರಿಯನ್ನು ಸಂಪರ್ಕಿಸುವ ಈ ವಿಮಾನ ಇಂದು ಆರಂಭವಾದ ಸಂದರ್ಭದಲ್ಲಿಇದರ ನೆನಪಿಗೆ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಹೊರತರುವ ಮೂಲಕ ಸ್ಮರಣೀಯ ಕಾರ್ಯವೊಂದನ್ನು ಮಾಡಿದೆ. ಈ ಅಂಚೆ ಲಕೋಟೆಯನ್ನು ಫಿಲಾಟಲಿ ಚಟುವಟಿಕೆಯನ್ನು ಪ್ರೋತ್ಸಾಹಿಸಲು ರೂಪಿಸಲಾಗಿದೆ
(ಗಲ್ಪ್ ಕನ್ನಡಿಗ)ಮೈಸೂರಿನಿಂದ ಮಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಅಂಚೆ ಇಲಾಖೆ ವಿಶೇಷವಾಗಿ ಹೊರತಂದ ವಿಶೇಷ ಲಕೋಟೆಯನ್ನು ರವಾನೆ ಮಾಡಲಾಗಿತ್ತು. ಮೈಸೂರಿನ ಸೀನಿಯರ್ ಪೋಸ್ಟ್ ಮಾಸ್ಟರ್ ಮಂಗಳೂರಿನ ಸೀನಿಯರ್ ಪೋಸ್ಟ್ ಮಾಸ್ಟರ್ ಗೆ ಕಳುಹಿಸಿದ ಈ ಪತ್ರವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಸ್ವೀಕರಿಸಲಾಯಿತು.
ಅದೇ ರೀತಿ ಮಂಗಳೂರಿನಿಂದ ಮೈಸೂರಿಗೆ ಕೂಡ ವಿಶೇಷ ಅಂಚೆ ಲಕೋಟೆಯನ್ನು ರವಾನಿಸಲಾಯಿತು. ಮಂಗಳೂರಿನಲ್ಲಿ ಈ ವಿಶೇಷ ಅಂಚೆ ಲಕೋಟೆಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ, ಮಂಗಳೂರು ವಿಮಾನ ನಿಲ್ದಾಣದ ಚೀಪ್ ಏರ್ ಪೋರ್ಟ್ ಆಫೀಸರ್ ಅಸೋತೋಶ್ ಚಂದ್ರ, ಏರ್ ಅಲಯನ್ಸ್ ಸಿಇಓ ಹರ್ ಪ್ರೀತ್ ಸಿಂಗ್, ಏರ್ ಇಂಡಿಯಾ ಸ್ಟೇಷನ್ ಮೆನೆಜರ್ ಪ್ರದೀಪ್ ಮೆನನ್ , ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್ ಬಿ ಉಪಸ್ಥಿತರಿದ್ದರು.
(ಗಲ್ಪ್ ಕನ್ನಡಿಗ)