85 ದಿನಗಳ ಬಳಿಕ ಸಂಜನಾ ಗಲ್ರಾನಿಗೆ ಸಿಕ್ಕಿತು ಜಾಮೀನು!
(ಗಲ್ಪ್ ಕನ್ನಡಿಗ)ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ಸಂಜನಾ ಗಲ್ರಾನಿಗೆ 85 ದಿನಗಳ ಬಳಿಕ ಜಾಮೀನು ದೊರೆತಿದೆ.
(ಗಲ್ಪ್ ಕನ್ನಡಿಗ)ಸಂಜನಾ ಗಲ್ರಾನಿಯನ್ನು ಡ್ರಗ್ಸ್ ಮಾರಾಟ ಜಾಲದ ಜೊತೆ ನಂಟು ಇದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಅನಾರೋಗ್ಯದ ಕಾರಣ ಹಿನ್ನೆಲೆಯಲ್ಲಿ ಸಂಜನಾಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಸಂಜನಾ ಗಲ್ರಾನಿ ಅನಾರೋಗ್ಯದಲ್ಲಿರುವುದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ಸಂಜನಾ ಪರ ವಕೀಲರು ವಾದ ಮಾಡಿದ್ದರು. 2018 ರಲ್ಲಿ ಸರ್ಜರಿಗೆ ಒಳಗಾಗಿದ್ದ ಸಂಜನಾ ಗಲ್ರಾನಿ ಅವರು 2019 ರಿಂದ ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕೋರ್ಟ್ ಗೆ ವಕೀಲರು ತಿಳಿಸಿದ್ದರು
(ಗಲ್ಪ್ ಕನ್ನಡಿಗ)ಸಂಜನಾಗೆ ಜಾಮೀನು ವೇಳೆ ಹಾಕಲಾದ ಷರತ್ತುಗಳು
1. ಮೂರು ಲಕ್ಷ ಮೊತ್ತಕ್ಕೆ ಭದ್ರತಾ ಠೇವಣಿ ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು
2. ತಿಂಗಳಿಗೆ ಎರಡು ಬಾರಿ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು
3. ತನಿಖೆಗೆ ಸಹಕರಿಸಬೇಕು
4. ಸಾಕ್ಷ್ಯ ನಾಶಪಡಿಸಬಾರದು
(ಗಲ್ಪ್ ಕನ್ನಡಿಗ)