
ಉಗ್ರ ಪರ ಗೋಡೆ ಬರಹ ಪ್ರಕರಣ: ಆರೋಪಿಗಳಿಗೆ ಆಶ್ರಯ ನೀಡಿದ ಚಿಕ್ಕಪ್ಪ ಅರೆಸ್ಟ್!
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಕದ್ರಿ ಅಪಾರ್ಟ್ ಮೆಂಟ್ ಗೋಡೆಯಲ್ಲಿ ಉಗ್ರ ಪರ ಮತ್ತು ನ್ಯಾಯಾಲಯದ ಆವರಣದಲ್ಲಿರುವ ಪೊಲೀಸ್ ಹಳೆ ಔಟ್ ಪೋಸ್ಟ್ ನಲ್ಲಿ ಆಕ್ಷೇಪಾರ್ಹ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)50 ವರ್ಷ ವಯಸ್ಸಿನ ತೀರ್ಥಹಳ್ಳಿಯ ಸಾದತ್ ಬಂಧಿತ ಆರೋಪಿ. ಈತ ಈಗಾಗಲೇ ಉಗ್ರ ಪರ ಗೋಡೆ ಬರಹ ಬರೆದು ಬಂಧಿತನಾಗಿರುವ ಪ್ರಮುಖ ಆರೋಪಿ ಮುಹಮ್ಮದ್ ಶಾರೀಕ್ ನ ಚಿಕ್ಕಪ್ಪ. ಈ ಮೊದಲು ಮೊಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಅಹ್ಮದ್ ಬಂಧಿತರಾಗಿದ್ದರು.
ಪ್ರಕರಣ ಬಳಿಕ ಇವರಿಗೆ ಸಾದತ್ ಆಶ್ರಯ ಮತ್ತು ಸಹಕಾರ ನೀಡಿದ್ದ. ಇದೀಗ ಸಾದತ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಕೋವಿಡ್ ಪರೀಕ್ಷೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡಿದೆ.
(ಗಲ್ಪ್ ಕನ್ನಡಿಗ)