ಶಿವಮೊಗ್ಗದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ - ಕಾರಣ ನಿಗೂಢ!
ಶಿವಮೊಗ್ಗ: ಶಿವಮೊಗ್ಗದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ನ ಕೊಠಡಿಯಲ್ಲಿಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ ಬಿ ಬಿಎಸ್ ಕಲಿಯುತ್ತಿರುವ ಲಲಿತಾ ಆತ್ಮಹತ್ಯೆ ಮಾಡಿಕೊಂಡವರು. ಭದ್ರಾವತಿಯ ವೆಂಕಟೇಶ್ ಎಂಬವರ ಪುತ್ರಿಯಾಗಿರುವ ಲಲಿತಾ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಹಾಸ್ಟೆಲ್ ನಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಲಲಿತಾ ಹಾಸ್ಟೆಲ್ ರೂಮಿನಲ್ಲಿ ಒಬ್ಬಳೆ ಇದ್ದು ರಾತ್ರಿ ಊಟ ಮಾಡಿಕೊಂಡು ಕೋಣೆ ಸೇರಿಕೊಂಡುದ್ದಳು. ಮರುದಿನ ಬಳಿಗ್ಗೆ ಹತ್ತು ಗಂಟೆಯಾದರೂ ಬಾಗಿಲು ತೆಗೆಯದಿದ್ದಾಗ ಆಕೆಯ ಸ್ನೇಹಿತೆ ಬಾಗಿಲು ಬಡಿದಿದ್ದಾಳೆ. ಆದರೆ ಎಷ್ಟೆ ಬಾಗಿಲು ಬಡಿದರೂ ಲಲಿತಾ ಬಾಗಿಲು ತೆರೆಯಲಿಲ್ಲ. ಬಳಿಕ ಹಾಸ್ಟೆಲ ನ ಸೆಕ್ಯುರಿಟಿಯವರು ರೂಮಿನ ಮೇಲ್ಬಾಗದ ಗಾಜಿನ ಕಿಟಕಿ ಸರಿಸಿ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಲಲಿತಾ ಈ ಹಿಂದೊಮ್ಮೆ ಆತ್ಮಹತ್ಯೆ ಯತ್ನಿಸಿದ್ದಳು. ಆದರೆ ಆತ್ಮಹತ್ಯೆ ಮಾಡಲು ಕಾರಣವೇನೆಂಬುದು ನಿಗೂಢವಾಗಿದೆ