SDPI ಪಾಕ್ ಪರ ಘೋಷಣೆ ಕೂಗಿದ್ದು ಹೌದ? ಪೊಲೀಸರು, SDPIಯವರು ಮತ್ತು ಬಿಜೆಪಿಯವರು ಏನು ಹೇಳ್ತಾರೆ ಗೊತ್ತಾ?
ಮಂಗಳೂರು: ಇವತ್ತು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ವೇಳೆ ಎಸ್ ಡಿ ಪಿ ಐ ಕಾರ್ಯಕರ್ತರು ಉಜಿರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಕೆಲವೊಂದು ಟಿವಿ ಚಾನೆಲ್ ಗಳು, ವೆಬ್ ತಾಣಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು.
ವೈರಲ್ ಆಗಿರುವ ವಿಡಿಯೋದಲ್ಲಿ ಇರುವ ಘೋಷಣೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಾಗಿದೆ ಎಂದು ಆರೋಪ. ಈ ಘೋಷಣೆಯ ವಿಡಿಯೋ ಗಮನಿಸಿ
ಈ ಘಟನೆಗ ಸಂಬಂಧಿಸಿದಂತೆ ದ.ಕ ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಪ್ರಕಟನೆ ಇದು;
ದಿನಾಂಕ 30.12.2020 ರಂದು ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆಯ ವೇಳೆ ಬೆಳ್ತಂಗಡಿ ಉಜಿರೆಯಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸದರಿ ವಿಡಿಯೋ ದ ಪ್ರಾರಂಭದ 3 ಸೆಕೆಂಡ್ ಗಳ ಬಳಿಕ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಕಂಡುಬಂದಿರುತ್ತದೆ. ಈ ವಿಡಿಯೊವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಈ ಘಟನೆಗೆ ತನಿಖೆಗೆ ಸಹಕಾರಿಯಾಗುವಂತಹ ಯಾವುದೇ ವಿಡಿಯೋ ಗಳು ಇದ್ದಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಗೆ (9480805300) ನೀಡಬೇಕಾಗಿ ವಿನಂತಿ
ದಿನಾಂಕ 30.12.2020 ರಂದು ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆಯ ವೇಳೆ ಬೆಳ್ತಂಗಡಿ ಉಜಿರೆಯಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಡಿ.ಪಿ.ಐ ಸಂಘಟಣೆಯ ಸುಮಾರು 10-15 ಜನ ಬೆಂಬಲಿಗರ ವಿರುದ್ದ ಅ.ಕ್ರ 99/20 ಕಲಂ 143,124A r/w 149 ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಪೊಲೀಸ್ ಅಧೀಕ್ಷಕರು , ದಕ್ಷಿಣ ಕನ್ನಡ ಜಿಲ್ಲೆ
ಈ ಘಟನೆಗೆ ಸಂಬಂಧಿಸಿದಂತೆ ನಳಿನ್ ಕುಮಾರ್ ಅವರು ನೀಡಿರುವ ಹೇಳಿಕೆ ಇದು- video
ಈ ಘಟನೆಗೆ ಸಂಬಂಧಿಸಿದಂತೆ ಎಸ್ ಡಿ ಪಿ ಐ ನೀಡಿರುವ ಹೇಳಿಕೆ ಇದು
ಉಜಿರೆ ಘಟನೆ ಬಗ್ಗೆ ಪ್ರತಿಕ್ರಿಯೆ
ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಗೆದ್ದ ಸಂದರ್ಭದಲ್ಲಿ ಎಸ್ಡಿಪಿಐ ಝಿಂದಿಬಾದ್ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಹೊರತು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ. ಎಸ್‌ಡಿಪಿಐನವರು ಪಾಕಿಸ್ತಾನ ಝಿಂದಾಬಾದ್ ಎಂಬ ಘೋಷಣೆ ಕೂಗಬೇಕು ಎಂದು ನಿಮ್ಮ ಹೃದಯ ಹೇಳುತ್ತಿದ್ದರೆ, ಆ ಘೋಷಣೆ ನಿಮಗೆ ಹಾಗೆಯೇ ಕೇಳಿಸುತ್ತದೆ. (ಉದಾಹರಣೆಗೆ ದಿಗ್ವಿಜಯ ಸೇರಿದಂತೆ ಕೆಲವು ಟೀವಿಯವರಿಗೆ, ವೆಬ್ಸೈಟ್‌ನವರಿಗೆ, ಎಬಿವಿಪಿಯವರಿಗೆ, ಬಿಜೆಪಿಯವರಿಗೆ ಮತ್ತು ದೇಶದ್ರೋಹಿಗಳಿಗೆ.)ಉಳಿದವರಿಗೆ ಎಸ್‌ಡಿಪಿಐ ಝಿಂದಾಬಾದ್ ಎಂದೇ ಕೇಳಿಸುತ್ತದೆ.
ವೀಡಿಯೊ ಒಮ್ಮೆ ಕೇಳಿಸಿಕೊಳ್ಳಿ. ನೀವು ಯಾರಂತ ನಿಮಗೇ ಗೊತ್ತಾಗುತ್ತದೆ.
ಸುಳ್ಳು ಸುದ್ದಿ ಹಬ್ಬಿಸಿದ ಟಿವಿ ವರದಿಗಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಠಾಣೆಗೆ ಕೇಸು ನೀಡಲಾಗಿದೆ.
ಅಥಾವುಲ್ಲಾ ಜೋಕಟ್ಟೆ
ಜಿಲ್ಲಾಧ್ಯಕ್ಷ ಎಸ್ಡಿಪಿಐ ದ.ಕ ಜಿಲ್ಲೆ
ಒಟ್ಟಿನಲ್ಲಿ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ವಿಷಯ ಚರ್ಚೆಗೆ ಬಂದಿದ್ದು , ಸಾಕ್ಷ್ಯಗಳಾಗಿರುವ ವಿಡಿಯೋಗಳು, ಎಸ್ ಡಿ ಪಿ ಐ ಮತ್ತು ಬಿಜೆಪಿ ಹೇಳಿಕೆಗಳು, ಪೊಲೀಸರ ಪ್ರಕಟನೆಗಳು ಗೊಂದಲ ಸೃಷ್ಟಿಸಿದೆ