ರಾಜ್ಯ ರಾಜಕೀಯದಲ್ಲಿ ಶಾಕಿಂಗ್; ಉಪಸಭಾಪತಿ ಆತ್ಮಹತ್ಯೆ
Tuesday, December 29, 2020
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಶಾಕಿಂಗ್ ಸುದ್ದಿ ಬಂದಿದೆ. ರಾಜ್ಯ ವಿಧಾನಪರಿಷತ್ ಉಪಸಭಾಪತಿಯಾಗಿರುವ ಎಸ್‌ಎಲ್ ಧರ್ಮೇಗೌಡರವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಎಸ್ ಎಲ್ ಧರ್ಮೇಗೌಡ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಸೋಮವಾರ ಸಂಜೆ ತಮ್ನ ಮನೆಯಿಂದ ಕಾರ್‌ನಲ್ಲಿ ಒಬ್ಬರೇ ತೆರಳಿದ್ದರು. ಆದರೆ ಒಬ್ಬರೆ ಹೊರಗೆ ಹೋದ ಧರ್ಮೆಗೌಡರು ರಾತ್ರಿಯಾದರೂ ವಾಪಸ್ ಬಾರದ ಕಾರಣ ಪೊಲೀಸರು, ಗನ್‌ಮ್ಯಾನ್,
ಮತ್ತು ಸ್ಥಳೀಯರು ಶೋಧ ನಡೆಸಿದ್ದರು. ಇಂದು ಬೆಳಗಿನ ಜಾವ ಗುಣಸಾಗರದ ರೈಲ್ವೆ ಹಳಿ ಬಳಿ ಅವರ ಛಿದ್ರವಾದ ದೇಹ ಪತ್ತೆಯಾಗಿದೆ.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಅವರ ತಲೆ ದೇಹದಿಂದ ಛಿದ್ರಗೊಂಡಿದೆ. ಅವರ ದೇಹ ಸಿಕ್ಕ ಸ್ವಲ್ಪ ದೂರದಲ್ಲಿಯೆ ಅವರ ತಲೆ ಪತ್ತೆಯಾಗಿದೆ.