ಒಂದು FACEBOOK ಫ್ರೆಂಡ್ ರಿಕ್ವೆಸ್ಟ್- ಮಂಗಳೂರಿನ ಈ ಗೆಳೆಯ ಕಳೆದುಕೊಂಡದ್ದು ರೂ 13 ಲಕ್ಷ
ಮಂಗಳೂರು: ಒಂದು facebook ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿಕೊಂಡ ಮಂಗಳೂರಿನ ಮಹಿಳೆಯೊಬ್ಬರು 13 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ.
ಮಂಗಳೂರಿನ ಮಹಿಳೆಯೊಬ್ಬರು ವಂಚನೆಗೊಳಗಾದವರು . ಈ ಮಹಿಳೆಯ ಫೇಸ್ ಬುಕ್ ಖಾತೆಗೆ ಇತ್ತೀಚೆಗೆ ಡಾ. ಜಿಮ್ ಕಿಯಾ ಎಂಬ ಹೆಸರಿನ ವ್ಯಕ್ತಿ ಫ್ರೆಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಸ್ವೀಕರಿಸಿದ ಬಳಿಕ ಡಾ. ಜಿಮ್ ಕಿಯಾ ಅವರು ಮಹಿಳೆಯ ವಾಟ್ಸಪ್ ನಂಬರ್ ಪಡೆದುಕೊಂಡು ವಾಟ್ಸಪ್ ಸಂದೇಶ ಕಳುಹಿಸುತ್ತಿದ್ದರು. ಬಳಿಕ ನಿಮ್ಮ ಮಗಳ ಹುಟ್ಟುಹಬ್ಬಕ್ಕೆ ಗಿಪ್ಟ್ ಕಳುಹಿಸುವುದಾಗಿ ತಿಳಿಸಿದ್ದರು.
ಇದಾದ ಕೆಲ ದಿನಗಳ ಬಳಿಕ ಯಾರೋ ವ್ಯಕ್ತಿಗಳು ಕಸ್ಟಮ್ ಅಧಿಕಾರಿಗಳೆಂದು ಕರೆ ಮಾಡಿ ಉಡುಗೊರೆಯನ್ನು ಬಿಡಿಸಿಕೊಳ್ಳಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಹಿಳೆಗೆ ಬೇರೆ ಬೇರೆ ಖಾತೆ ನೀಡಿ ಅದಕ್ಕೆ ಹಣ ಹಾಕಿಸಿಕೊಂಡಿದ್ದಾರೆ. ಹೀಗೆ ಮಹಿಳೆ ಒಟ್ಟು ರೂ.13,35,000/- ಹಣವನ್ನು ಹೀಗೆ ಹಾಕಿದ್ದಾರೆ. ಕೊನೆಗೆ ಇದು ವಂಚನೆ ಪ್ರಕರಣ ಎಂದು ತಿಳಿದುಕೊಂಡ ಬಳಿಕ ಅವರು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ