ಖಾದರ್ ಹಿಂಬಾಲಿಸಿದ ಬೈಕ್ ಸವಾರ: ನಾಳೆ ಕಾಂಗ್ರೆಸ್ ನಿಂದ ಪ್ರತಿಭಟನೆ
Wednesday, December 23, 2020
ಮಂಗಳೂರು: ಮಾಜಿ ಸಚಿವ ಯು ಟಿ ಖಾದರ್ ಅವರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ನಾಳೆ ಪ್ರತಿಭಟನೆ ನಡೆಯಲಿದೆ.
ಮಾಜಿ ಸಚಿವ ಯು. ಟಿ. ಖಾದರ್ ರವರನ್ನು ಅನುಮಾನಾಸ್ಪದ ರೀತಿಯಲ್ಲಿ ಹಿಂಬಾಲಿಸಿದ ಯುವಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ.
ಇದನ್ನು ಓದಿ: ಮಾಜಿ ಸಚಿವ ಯು ಟಿ ಖಾದರ್ ಗೆ ಕೊಲೆಯತ್ನ ನಡೆಯಿತ?- ಬೈಕ್ ನಲ್ಲಿ ಹಿಂಬಾಲಿಸಿ ಬಂದವರು ಯಾರು?
ನಾಳೆ ಬೆಳಿಗ್ಗೆ 10.30 ಕ್ಕೆ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನ ಕಟ್ಟಡದ ಎದುರುಗಡೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಳಿಕ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.