ಮಾಜಿ ಸಚಿವ ಯು ಟಿ ಖಾದರ್ ಗೆ ಕೊಲೆಯತ್ನ ನಡೆಯಿತ?- ಬೈಕ್ ನಲ್ಲಿ ಹಿಂಬಾಲಿಸಿ ಬಂದವರು ಯಾರು?
ಮಂಗಳೂರು: ಮಂಗಳೂರಿನಲ್ಲಿ ಇಂದು ಸಂಜೆಯ ವೇಳೆಗೆ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಹತ್ಯೆಗೆ ಯತ್ನಿಸಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಸಂಜೆ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಖಾದರ್ ವಾಹನ ಹಿಂಬಾಲಿಸಿಕೊಂಡು ಬಂದಿದ್ದು ಈ ಸುದ್ದಿಗೆ ಕಾರಣವಾಗಿದೆ.
ಘಟನೆ ನಡೆದದ್ದು ಹೀಗೆ
ದೇರಳಕಟ್ಟೆಯ ಕಾರ್ಯಕ್ರಮ ಮುಗಿಸಿ ಮಾಜಿ ಸಚಿವ ಯು ಟಿ ಖಾದರ್ ಅವರು ಬೆಂಗಳೂರಿಗೆ ತೆರಳಬೇಕಿತ್ತು. ಹೀಗೆ ಕಾರು ಹತ್ತಿ ಮುಂದೆ ಸಾಗುತ್ತಿದ್ದಂತೆ ಖಾದರ್ ಅವರ ಕಾರನ್ನು ಬೈಕೊಂದು ಫಾಲೋ ಮಾಡಿಕೊಂಡು ಬಂದಿದೆ. ಇದನ್ನು ಖಾದರ್ ಅವರ ಎಸ್ಕಾರ್ಟ್ ಮಾಡುವ ಪೊಲೀಸರು ಗಮನಿಸಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರು ನಂತೂರು ಬರುವವರೆಗೂ ಬೈಕ್ ಇವರ ಕಾರನ್ನು ಫಾಲೋ ಮಾಡಿಕೊಂಡು ಬರುತ್ತಿತ್ತು. ನಂತೂರಿನಲ್ಲಿ ಪೊಲೀಸರು ಬೈಕನ್ನು ತಡೆದು ನಿಲ್ಲಿಸುವ ವೇಳೆ ಬೈಕ್ ಸವಾರ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಪರಾರಿಯಾಗಿರುವ ಬೈಕ್ ಸವಾರನಿಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನು ಓದಿ:ಖಾದರ್ ಹಿಂಬಾಲಿಸಿದ ಬೈಕ್ ಸವಾರ: ನಾಳೆ ಕಾಂಗ್ರೆಸ್ ನಿಂದ ಪ್ರತಿಭಟನೆ
ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಯಾರು ಮತ್ತು ಯಾಕಾಗಿ ಹಿಂಬಾಲಿಸಿಕೊಂಡು ಬಂದ ಎಂಬುದು ಆತನ ಬಂಧನದ ಬಳಿಕ ತಿಳಿದುಬರಬೇಕಾಗಿದೆ