
ಲಂಡನ್ ಕೊರೊನಾ ಭೀತಿ; ನಾಳೆಯಿಂದ ನೈಟ್ ಕರ್ಫ್ಯೂ
(ನೈಟ್ ಕರ್ಪ್ಯೂ ಸಮಯ ಬದಲಾವಣೆ ಆಗಿದೆ- ಇಂದಿನಿಂದ ನೈಟ್ ಕರ್ಪ್ಯೂ ಇಲ್ಲ, ನಾಳೆಯಿಂದ ಜನವರಿ 1 ತನಕರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಮಾತ್ರ ನೈಟ್ ಕರ್ಪ್ಯೂ ಇರುತ್ತದೆ)
ಮಂಗಳೂರು ; ಬ್ರಿಟನ್ ನಲ್ಲಿ ಕಾಣಿಸಿಕೊಂಡ ರೂಪಾಂತರಗೊಂಡ ಕೊರೊನಾ ಕಾರಣದಿಂದ ನಾಳೆ ರಾತ್ರಿಯಿಂದ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ.
ಇಂದಿನಿಂದ ಜನವರಿ 1 ತಾರೀಖಿನವರೆಗೆ ನೈಟ್ ಕರ್ಪ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೊನಾ ಸಲಹಾ ಸಮಿತಿ ಶಿಪಾರಸುಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್ ಜೊತೆಗೆ ಮುಖ್ಯಮಂತ್ರಿ ಸಭೆ ನಡೆಸಿ ಇಂದಿನಿಂದಲೇ ನೈಟ್ ಕರ್ಪ್ಯೂಗೆ ಆದೇಶ ಹೊರಡಿಸಿದ್ದಾರೆ.
ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆ ತನಕ ನೈಟ್ ಕರ್ಪ್ಯೂ ಇದ್ದು ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರಬರುವಂತಿಲ್ಲ. ತುರ್ತು ಸೇವೆಗೆ ವಿನಾಯಿತಿ ಇದ್ದು ಅಗತ್ಯ ಸೇವೆ ಹೊರತುಪಡಿಸಿ ಬೇರೆಲ್ಲವೂ ಬಂದ್ ಇರಲಿದೆ.