ಲಂಡನ್ ಕೊರೊನಾ ವೈರಸ್ ಭೀತಿ: ಬ್ರಿಟನ್ ನಿಂದ ಮಂಗಳೂರಿಗೆ ಬಂದಿದ್ದಾರೆ 58 ಮಂದಿ
Tuesday, December 22, 2020
ಮಂಗಳೂರು: ಕೊರೊನಾ ಎರಡನೆ ಅಲೆಯ ಭೀತಿ ಮಧ್ಯೆ ಬ್ರಿಟನ್ ನಲ್ಲಿ ಕಾಣಿಸಿಕೊಂಡ ರೂಪಾಂತರಗೊಂಡ ಕೊರೊನಾ ವೈರಸ್ ಹಾವಳಿ ಇಡೀ ಜಗತ್ತನ್ನೆ ಬೆಚ್ಚಬೀಳಿಸಿದೆ. ಇದೀಗ ದೇಶಾದಾದ್ಯಂತ ಲಂಡನ್ ನಿಂದ ಬಂದವರ ಬಗ್ಗೆ ಭೀತಿ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 58 ಮಂದಿ ಬ್ರಿಟನ್ ನಿಂದ ಬಂದಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಬೆಂಗಳೂರು ಮೂಲಕ ಮಂಗಳೂರಿಗೆ ಬಂದಿರುವ 58 ಮಂದಿಯ ತಪಾಸಣೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಡಿಸೆಂಬರ್ ಏಳರಂದು ಮಂಗಳೂರಿಗೆ 43 ಮಂದಿ ಬಂದಿದ್ದರು. ಡಿಸೆಂಬರ್ 21 ಮತ್ತು 23 ರಂದು 15 ಮಂದಿ ಬಂದಿದ್ದರು. ಇವರೆಲ್ಲರೂ ಈಗಾಗಲೆ ಕೊರೊನಾ ನೆಗೆಟಿವ್ ವರದಿಯೊಂದಿಗೆ ಮಂಗಳೂರಿಗೆ ಬಂದಿದ್ದರು. ಆದರೆ ಲಂಡನ್ ನಲ್ಲಿ ಉದ್ಬವಿಸಿದ ಭೀತಿಯ ಹಿನ್ನೆಲೆಯಲ್ಲಿ ಇವರಿಗೆ ಮತ್ತೆ ಕೊರೊನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ