PFI ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ ಎಂ ಶರೀಫ್ ನಿಧನ
Tuesday, December 22, 2020
ಮಂಗಳೂರು; ಪಿ ಎಫ್ ಐ ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ ಎಂ ಶರೀಫ್ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನಲ್ಲಿ ನಿಧನರಾದರು.
ಕೆ ಎಂ ಶರೀಫ್ ಅವರು ಶ್ವಾಸಕೋಶ, ರಕ್ತದೊತ್ತಡ , ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು.ಅವರು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು .
ಬಂಟ್ವಾಳ ತಾಲೂಕಿನ ಮಿತ್ತಬೈಲ್ ನಿವಾಸಿಯಾಗಿದ್ದ ಕೆ ಎಂ ಶರೀಫ್ ಅವರು ಖ್ಯಾತ ಧಾರ್ಮಿಕ ವಿದ್ವಾಂಸ ದಿವಂಗತ ಮಿತ್ತಬೈಲ್ ಅಬ್ದುಲ್ ಹಾಜಿ ಅವರ ಪುತ್ರರಾಗಿದ್ದಾರೆ.
KFD ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದ ಅವರು kfd ಯು pfi ಜೊತೆಗೆ ವಿಲೀನವಾದ ಬಳಿಕ pfi ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ ಪಿಎಫ್ಐ ರಾಷ್ಟ್ರಾಧ್ಯಕ್ಷ ರಾಗಿದ್ದರು. ಬಂಟ್ವಾಳ ತಾಲೂಕಿನ ಮಿತ್ತಬೈಲ್ ಮಸೀದಿಯಲ್ಲಿ ಮೃತರ ಧಪನ ಕಾರ್ಯ ನಡೆಯಿತು.