-->

 ಸೌತಡ್ಕದಲ್ಲಿ ದರೋಡೆಕೋರರ ದುಷ್ಕೃತ್ಯ:ಮನೆಮಾಲೀಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿ ಯಿಂದ ಇರಿದು ದರೋಡೆ

ಸೌತಡ್ಕದಲ್ಲಿ ದರೋಡೆಕೋರರ ದುಷ್ಕೃತ್ಯ:ಮನೆಮಾಲೀಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿ ಯಿಂದ ಇರಿದು ದರೋಡೆ
ಮಂಗಳೂರು: ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾಮದ ಸೌತಡ್ಕದಲ್ಲಿ ಮನೆ ಮಾಲೀಕನನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆ ನಡೆದಿದೆ.


ಸೌತಡ್ಕ ಮಹಾಗಣಪತಿ ದೇವಸ್ಥಾನದ ಸಮೀಪವಿರುವ ವಿ ಎಚ್ ಪಿ ಮುಖಂಡ ತುಕ್ತಪ್ಪ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಒಂಬತ್ತು ಮಂದಿ ದರೋಡೆಕೋರರು ರಾತ್ರಿ 12 ಗಂಟೆಯಿಂದ 2 ಗಂಟೆಯ ಮಧ್ಯಭಾಗದಲ್ಲಿ ಮನೆಗೆ ನುಗ್ಗಿ ತುಕ್ರಪ್ಪ ಶೆಟ್ಟಿ ಅವರನ್ನು ಕಟ್ಟಿ ಹಾಕಿ ಅವರ ಪತ್ನಿ ಗೀತಾ ಶೆಟ್ಟಿಗೆ ಚೂರಿಯಿಂದ ದಾಳಿ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ , ನಗದು ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.

 

 

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99