ಮಾರ್ಕ್ಸ್ ಬೇಕಿದ್ದರೆ ನನ್ನ ಜೊತೆ .... ಮಾಡಿ ಎಂದ ಸರ್ಕಾರಿ ಶಿಕ್ಷಕ: ವಿದ್ಯಾರ್ಥಿನಿಯರಿಗೆ ಶಾಕ್!
ಪವಿತ್ರ ವೃತ್ತಿಯಾಗಿರುವ ಶಿಕ್ಷಕ ವೃತ್ತಿಗೆ ಕಳಂಕ ತಟ್ಟುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೆ ಇದೆ. ಇದೀಗ ಶಿಕ್ಷಕನೊಬ್ಬ ಮಾರ್ಕ್ಸ್ ಬೇಕಿದ್ದರೆ ನನ್ನ ಜೊತೆ ದೇಹ ಹಂಚಿಕೊಳ್ಳಿ ಎಂದು ಹೇಳಿ ಜೈಲುಪಾಲಾಗಿದ್ದಾನೆ.
ಈ ಘಟನೆ ರಾಜಸ್ಥಾನದ ನೀಮ್ರಾನದಲ್ಲಿ ನಡೆದಿದೆ. ನೀಮ್ರಾನದ ಸರಕಾರಿ ಶಾಲೆಯ ಶಿಕ್ಷಕ ದೇವ್ ಪ್ರಕಾಶ್ ಯಾದವ್ (45) ಈ ಕೃತ್ಯ ಮಾಡಿದವನು. ಈತ ವಿದ್ಯಾರ್ಥಿನಿಯರಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದನು.
ಈತ ಉತ್ತಮ ಮಾರ್ಕ್ಸ್ ಬೇಕಿದ್ದರೆ ನನ್ನ ಜೊತೆಗೆ ... ಮಾಡಿಕೊಳ್ಳಿ ಎಂದು ವಿದ್ಯಾರ್ಥಿನಿಯರನ್ನು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಲು ನೋಡಿದ್ದಾನೆ. ಈತನ ಕುಕೃತ್ಯದ ಬಗ್ಗೆ ವಿದ್ಯಾರ್ಥಿನಿಯರು ಶಾಲೆಗೆ ವಿಚಾರಣೆಗೆ ಬಂದಿದ್ದ ಮೇಲಾಧಿಕಾರಿ ಮುಂದೆ ತಿಳಿಸಿದ್ದಾರೆ. ಅದರಂತೆ ಮೇಲಾಧಿಕಾರಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕಾಮುಕ ಶಿಕ್ಷಕನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ